ಕನ್ನಡಿಗರ ತಲೆ ಮೇಲೆ ಸಾಲದ ಹೊರೆ…?

Kannada News

09-08-2017

ಯಾವುದೇ ಒಂದು ಸರ್ಕಾರ, ಹಲವಾರು ಕಾರಣಗಳಿಗಾಗಿ ಸಾಲ ಮಾಡಬೇಕಾಗಿ ಬರುತ್ತದೆ.  ಸಮರ್ಥನೀಯ ಕಾರಣಗಳಿಗಾಗಿ ಸಾಲ ಮಾಡಿದ್ದರೆ ಅದನ್ನು ಒಪ್ಪಬಹುದು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಲದ ಬಾಬತ್ತು ಮಿತಿಮೀರಿ ಮುಂದುವರಿದಿದೆಯಂತೆ. ನಾಲ್ಕು ವರ್ಷಗಳಿಗೂ ಹಿಂದೆ ಅಧಿಕಾರ ಸ್ವೀಕರಿಸುವ ವೇಳೆ, ವಿತ್ತೀಯ ಜಾಣತನ ತೋರುವಲ್ಲಿ ಸಿದ್ದರಾಮಯ್ಯನವರು ನಿಪುಣರು, ಅವರು ರಾಜ್ಯಕ್ಕೆ ಆರ್ಥಿಕ ಶಿಸ್ತು ತರುತ್ತಾರೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಇದೀಗ ಅವೆಲ್ಲವೂ ಪೂರ್ತಿ ಹುಸಿಯಾಗಿರುವಂತೆ ಕಂಡುಬರುತ್ತಿದೆ.

ಆರ್ಥಿಕ ತಜ್ಞರು ಹೇಳುವಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ರಾಜ್ಯದ ಜನತೆಯ ತಲೆಯ ಮೇಲೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಹೊರಿಸಿದೆಯಂತೆ. ಹೀಗಾಗಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ರಾಜ್ಯಸರ್ಕಾರದ ವೈಫಲ್ಯವನ್ನು ತೋರಿಸಿಕೊಡಲು ವಿರೋಧ ಪಕ್ಷಗಳು, ಮುಂಬರುವ ಚುನಾವಣೆಯಲ್ಲಿ ಇದೇ ವಿಚಾರವನ್ನು ದೊಡ್ಡದಾಗಿ ಪ್ರಸ್ತಾಪಿಸುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿವೆ.

ಹಣಕಾಸು ಸಚಿವರಾಗಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಪಡೆದಿರುವ ಸಿದ್ದರಾಮಯ್ಯನವರು, ಕರ್ನಾಟಕ ರಾಜ್ಯವನ್ನು ಹಿಂದೆ ಎಂದೂ ಇರದ ರೀತಿಯಲ್ಲಿ ದೊಡ್ಡ ಮೊತ್ತದ ಸಾಲಗಾರ ರಾಜ್ಯವನ್ನಾಗಿಸಿದ ಅಪಕೀರ್ತಿಗೂ ಪಾತ್ರರಾಗುವುದು ಸಂತೋಷದ ವಿಚಾರವೇನೂ ಅಲ್ಲ. ಆದರೆ, ಹಲವು ಭಾಗ್ಯಗಳ ಸರದಾರರಾಗಿ ಮೆರೆದ ಸಿದ್ದರಾಮಯ್ಯನವರು ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಅನ್ನುವಂಥ ನೀತಿಯನ್ನು ಅನುಸರಿಸಿದ್ದೇ ಇದಕ್ಕೆ ಕಾರಣವಾಗಿರಬಹುದು.


ಸಂಬಂಧಿತ ಟ್ಯಾಗ್ಗಳು

ಕನ್ನಡಿಗರ ತಲೆ ಮೇಲೆ ಸಾಲದ ಹೊರೆ…?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ