ಅನಧೀಕೃತ ಬೆಟ್ಟಿಂಗ್: 9 ಮಂದಿ ಬಂಧನ !

Kannada News

09-08-2017

ಮೈಸೂರು: ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮೈಸೂರಿನ ರೇಸ್ ಕೋರ್ಸ್ ನ ಹೊರ ಆವರಣದಲ್ಲಿ ಅನಧಿಕೃತವಾಗಿ ರೇಸ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ 9 ಜೂಜುಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಬೆಟ್ಟಿಂಗ್ ಗಾಗಿ ತೊಡಗಿಸಿದ್ದ 1,71,900 ರೂ. ನಗದು ಹಾಗೂ ಕುದುರೆಗಳ ಮಾಹಿತಿ ಇರುವ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ವಿಖ್ಯಾತ್ ಅರಸ್ (29), ಶ್ರೀನಿವಾಸ್ (42), ರಜತ್ (27), ಚೇತನ್ (25), ವೆಂಕಟರಾಮು (61), ರಾಮರಾಜೇ ಅರಸ್ (72), ಕುಮಾರ್ (೪೪), ಚರಣ್ (32) ಹಾಗೂ ಶಂಕರ್ ( 36) ಬಂಧಿತ ಆರೋಪಿಗಳು. ಇವರ ವಿರುದ್ಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ