ಮನೆಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ಹಾನಿ !

Kannada News

08-08-2017

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ, ಶಿರಸಿಯ, ಕಸ್ತೂರಬಾ ನಗರದ ಬೃಂದಾವನ ಕಾಲೋನಿಯ ಮನೆಯೊಂದರಲ್ಲಿ ಆಕಸ್ಮಿಕವಾಗಿ ಹತ್ತಿಕೊಂಡಿದ್ದು, ಬೆಂಕಿಗೆ ಮನೆಯೊಳಗಿನ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ. ಇಲ್ಲಿನ ಬೃಂದಾವನ ಕಾಲೋನಿಯ ಮಹಮದ್ ರಫೀಕ್ ಶೇಖ್ ಬಾಡಿಗೆಗಿದ್ದ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಕಾರಣ, ಮನೆಯೊಳಗಿನ ಬಹುತೇಕ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಮನೆಗೆ ಬೀಗ ಹಾಕಿದ ವೇಳೆ ಘಟನೆ ನಡೆದಿದ್ದು, ಬಟ್ಟೆ, ಟಿವಿ, ಹೊಲಿಗೆ ಯಂತ್ರ, ಬಂಗಾರದ ಆಭರಣ, ಪಾತ್ರೆ, ಆಧಾರ ಹಾಗೂ ರೇಶನ್ ಕಾರ್ಡ್, ಲೈಸೆನ್ಸ್, ರಿಕ್ಷಾ ಪರ್ಮಿಟ್, ಆರ್.ಸಿ.ಬುಕ್, ಮಿಕ್ಸರ್ ಸೇರಿದಂತೆ ೨ ಲಕ್ಷ ರೂಪಾಯಿಗೂ ಅಧಿಕ ಹಾನಿ ಸಂಭವಿಸಿದೆ.  ಮನೆಯಿಂದ ದಟ್ಟ ಹೊಗೆ ಬರುತ್ತಿದ್ದು, ಇದನ್ನು ಗಮನಿಸಿ ಬಾಗಿಲು ತೆರದ ಸ್ಥಳಿಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ೨ ಸಿಲಿಂಡರ್ ಮನೆಯೊಳಗಿದ್ದು, ಅದನ್ನು ಹೊರತೆಗೆದ ಪರಿಣಾಮ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಅಗ್ನಿ ಶಾಮಕ ದಳದ ಜೆ.ಎಂ.ಇಮ್ಮನುಯಲ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ