ನಾಯಿ ಮರಿಗಳನ್ನು ಕೊಂದಿದ್ದಕ್ಕೆ ದಂಡ !

Kannada News

08-08-2017 487

ಬೆಂಗಳೂರು: ಬೊಗಳುತ್ತಿದ್ದ ಕಾರಣಕ್ಕೆ 15 ದಿನದ ನಾಯಿಮರಿಗಳನ್ನು ಕಲ್ಲಿಗೆ ಹೊಡೆದು, ಕೊಂದ ಪೊನ್ನಮ್ಮ ಎಂಬ ಮಹಿಳೆಗೆ ಎಸಿಎಂಎಂ ನ್ಯಾಯಾಲಯ 1 ಸಾವಿರ ರೂ. ದಂಡ ವಿಧಿಸಿದೆ.

ಕಳೆದ 2016 ರ ಮಾರ್ಚ್ 16 ರಂದು 15 ದಿನಗಳ ಎಂಟು ನಾಯಿ ಮರಿಗಳನ್ನು ಕ್ರೂರವಾಗಿ ಕೊಂದ ಪೀಣ್ಯದ ಶೆಟ್ಟಿಹಳ್ಳಿಯ ಪೊನ್ನಮ್ಮಗೆ 45ನೇ ಎಸಿಎಂಎಂ ನ್ಯಾಯಾಲಯ 1 ಸಾವಿರ ದಂಡ ಇಲ್ಲವೇ 15 ದಿನ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ನಡುವೆ ಪೊನ್ನಮ್ಮಗೆ ನ್ಯಾಯಾಲಯದ ನೀಡಿರುವ ಶಿಕ್ಷೆ ಪ್ರಮಾಣಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಕಳೆದ 2016ರ ಮಾರ್ಚ್ 16 ರಂದು 15 ದಿನಗಳ ಎಂಟು ನಾಯಿ ಮರಿಗಳನ್ನು ಮಹಿಳೆ ಕ್ರೂರವಾಗಿ ಹತ್ಯೆ ಮಾಡಿದ್ದಳು. ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ಈ ಪ್ರಕರಣ ನಡೆದಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಮರಿ ಹಾಕಿದ್ದ ನಾಯಿ, ರಾತ್ರಿಯಲ್ಲಾ ಬೋಗಳುತ್ತವೆ ಎನ್ನುವ ಕಾರಣಕ್ಕೆ ಹದಿನೈದು ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಮಹಿಳೆ ಹತ್ಯೆ ಮಾಡಿದ್ದರು.

ಮರಿಗಳನ್ನು ಕೊಂದ ಹದಿನೈದು ದಿನಗಳ ಬಳಿಕ ತಾಯಿ ನಾಯಿಯೂ ಸಾವನಪ್ಪಿತ್ತು. ಈ ಕುರಿತು ಸ್ಥಳೀಯರು ನೀಡಿದ ದೂರಿನ ಮೇರೆಗೆ ಕ್ಯೂಪಾ ಪ್ರಾಣಿ ದಯಾ ಸಂಘ ದೂರು ದಾಖಲಿಸಿತ್ತು. ಪ್ರಕರಣದ ದಾಖಲಿಸಿದ ಪೀಣ್ಯ ಪೊಲೀಸರು ಪೊನ್ನಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ