ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ !

Kannada News

08-08-2017

ಬೆಂಗಳೂರು: ಆಟೋ ಒಂದರಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ದೊಡ್ಡಬಳ್ಳಾಪುರ ಪೊಲೀಸರು 10 ಕೆ.ಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಕದಿರಿ ಮೂಲದ ರೆಹಮತ್ ಉಲ್ಲಾ ಮತ್ತು ಸುಧಾಕರ್ ಬಂಧಿತ ಆರೋಪಿಗಳು. ನಿನ್ನೆ ಮಧ್ಯಾಹ್ನ ಆಂಧ್ರಪ್ರದೇಶದಿಂದ ಅಕ್ರಮವಾಗಿ ದೊಡ್ಡಬಳ್ಳಾಪುರದ ಟಿ.ಬಿ.ಕ್ರಾಸ್ ಮೂಲಕ ಆಟೋದಲ್ಲಿ 10 ಕೆ.ಜಿ ಗಾಂಜಾ ಸಾಗಿಸುತ್ತಿದ್ದೂ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 10ಕೆ.ಜಿ ಗಾಂಜಾವಿದ್ದ ಮೂಟೆ ಸಾಗಿಸುತ್ತಿದ್ದ ಆಟೋ ವಶಪಡಿಸಿಕೊಂಡಿದ್ದೂ, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ