ಮನೆಯಲ್ಲಿ ಅಡಗಿದ್ದ ಚಿರತೆ ಸೆರೆ !

Kannada News

08-08-2017

ಉಡುಪಿ: ಉಡುಪಿಯ ಅಲೆವೂರು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆ ಕೆಲಕಾಲ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಅಲೆವೂರು ಗ್ರಾಮದ ಕೆಮ್ತೂರಿನಲ್ಲಿ ಚಿರತೆ ಪತ್ತೆಯಾಗಿದೆ. ಮುಂಜಾನೆ  ನಾಲ್ಕು ಗಂಟೆಯ ವೇಳೆಯಲ್ಲಿ, ಗ್ರಾಮದ ಜಯಲಕ್ಷ್ಮಿ ಎಂಬವರ ಮನೆಯಲ್ಲಿ  ಚಿರತೆ ಅವಿತಿರುವುದು ಕಂಡುಬಂದಿದೆ. ಮನೆಯ ಬಾತ್ ರೂಂ ನೊಳಗೆ ಚಿರತೆ ಕಂಡು ಗಾಬರಿಯಾದ ಮನೆಯ ಯಜಮಾನ, ಬುದ್ದಿವಂತಿಕೆಯಿಂದ ಬಾತ್ ರೂಂ ಬಾಗಿಲು ಹಾಕಿದ್ದಾರೆ. ನಂತರ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದೂ, ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದ್ದಾರೆ. ಈ ಭಾಗದಲ್ಲಿ ಎರಡನೇ ಬಾರಿಗೆ ಚಿರತೆ ಸೆರೆಯಾಗಿದ್ದೂ ಗ್ರಾಮದ ಜನತೆ ಭಯಭೀತರಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ