ಮಗನನ್ನು ಉಳಿಸಲು ಬಂದ ತಂದೆ ಕೊಲೆ !

Kannada News

08-08-2017

ಹುಬ್ಬಳ್ಳಿ: ಮಗನನ್ನು ಉಳಿಸಲು ಅಡ್ಡ  ಬಂದ ತಂದೆ ಕೊಲೆಯಾಗಿರುವ ದಾರುಣ ಘಟನೆಯು, ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ್ ಠಾಣಾ ವ್ಯಾಪ್ತಿಯ ಕೆ.ಬಿ ನಗರದಲ್ಲಿ ಘಟನೆ ಸಂಭವಿಸಿದೆ. ತಿರುಪತಿ ವೀರಾಪೂರ್ (45) ಮೃತ ತಂದೆ. ಇವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರು ಚಾಲಕರಾಗಿದ್ದರು. ನಿನ್ನೆ ಸಂಜೆ ತಿರುಪತಿ ವೀರಾಪೂರ್, ಅವರ ಮಗ ಶ್ರೀನಿವಾಸ್, ಬೈಕ್ ಕಳ್ಳತನ ಮಾಡಿದ್ದೂ, ವಿಷಯ ತಿಳಿದ ಬೈಕ್ ಮಾಲೀಕರು ಈ ಕುರಿತು,  ಶ್ರೀನಿವಾಸ್ ಮೇಲೆ ಹಲ್ಲೆಗೆ ಮುಂದಾಗಿದ್ದರೂ, ಈ ವೇಳೆ ಬಿಡಿಸಲು ಬಂದ ಶ್ರೀನಿವಾಸ್ ತಂದೆಗೆ  ಚಾಕುವಿನಿಂದ ಇರಿದಿದ್ದಾರೆ. ಇರಿತದಿಂದ ತೀವ್ರವಾಗಿ ಗಾಯಗೊಂಡ, ತಿರುಪತಿ ಅವರನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ತಿರುಪತಿ ವೀರಾಪೂರ್ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ