ಡೋಕ್ಲಾಮ್ ಬಿಕ್ಕಟ್ಟು: ಚೀನಾ ಮೌನ !

Kannada News

08-08-2017

ಸಿಕ್ಕಿಂ: ಡೋಕ್ಲಾಮ್ ನಿಂದ ಭಾರತೀಯ ಯೋಧರ ತೆರವಿಗೆ ಚೀನಾ 2 ವಾರಗಳಲ್ಲಿ ಸೇನಾ ಸಣ್ಣ ಪ್ರಮಾಣದ ದಾಳಿ ನಡೆಸಬಹುದು ಎಂಬ ವರದಿಗಳ ಕುರಿತಂತೆ ಚೀನಾ ತನ್ನ ಮೌನವನ್ನು ಮುಂದುರೆಸಿದ್ದು, ವಿವಾದಿತ ಗಡಿ ಪ್ರದೇಶದಿಂದ ಭಾರತ ಮೊದಲು ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಹೇಳಿದೆ.  ತಜ್ಞರು ನೀಡಿದ ಹೇಳಿಕೆಗಳು ಆಧಾರ ಮೇರೆಗೆ ಮಾಧ್ಯಮಗಳು ವರದಿ ಮಾಡಿವೆ. ಯಾವುದೇ ವಿಚಾರ ಸಂಬಂಧ ಅಧಿಕೃತ ಮಾಹಿತಿಗಳನ್ನು ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳಿಂದ ಪಡೆದುಕೊಳ್ಳಬೇಕಿದೆ ಎಂದು, ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಸೀನಿಯರ್ ಕರ್ನಲ್ ರೆನ್ ಗುವಾಕಿಯಾಂಗ್ ತಿಳಿಸಿದ್ದಾರೆ.

ಡೋಕ್ಲಾಮ್ ನಲ್ಲಿ ಚೀನಾಗೆ ಸೇರಿದ್ದಾಗಿದ್ದು, ಅಲ್ಲಿ ರಸ್ತೆ ನಿರ್ಮಾಣ ಮಾಡಲು ಎಲ್ಲಾ ರೀತಿಯ ಕಾನೂನುಬದ್ಧ ಹಕ್ಕುಗಳನ್ನು ಹೊಂದಿದ್ದೇವೆ. ಆದರೆ, ಇದಕ್ಕೆ ಭಾರತೀಯ ಸೇನೆ ಅಡ್ಡಿಪಡಿಸುತ್ತಿದೆ. ಚೀನಾ ಗಡಿ ಪ್ರದೇಶವನ್ನು ಭಾರತೀಯ ಸೇನೆ ಪ್ರವೇಶ ಮಾಡಿದ್ದು, ಮೊದಲು ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಿದೆ. ರಸ್ತೆ ನಿರ್ಮಾಣ ಮಾಡುತ್ತಿರುವ ಕುರಿತಂತೆ ಮೇ.18 ರಂದೇ ಭಾರತಕ್ಕೆ ನಾವು ಎರಡು ಬಾರಿ ಮಾಹಿತಿ ನೀಡಿದ್ದೆವು. ಜೂನ್.8 ರಂದು ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದೆವು. ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಗಡಿ ಕುರಿತ ಭಾರತ-ಚೀನಾ ನಡುವೆ ನಡೆದ ಸಭೆಯಲ್ಲಿ ಭಾರತಕ್ಕೆ ಮಾಹಿತಿ ನೀಡಿದ್ದೆವು. ಆಗೇಕೆ ಭಾರತ ಮೌನವಾಗಿತ್ತು ಎಂದು ಪ್ರಶ್ನಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ