ಎವರೆಸ್ಟ್ ಹತ್ತಿದ್ದು ಸುಳ್ಳು: ಪೊಲೀಸ್ ಪೇದೆ ವಜಾ !

Kannada News

08-08-2017

ಎವರೆಸ್ಟ್‌ ಶಿಖರವನ್ನು ಏರಿರುವುದಾಗಿ ಸುಳ್ಳು ಹೇಳಿದ್ದ ಮಹಾರಾಷ್ಟ್ರದ ಪುಣೆಯ ಪೊಲೀಸ್ ಪೇದೆ ದಂಪತಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ಪುಣೆಯ ಪೊಲೀಸ್ ಪೇದೆ ದಂಪತಿಯಾದ ದಿನೇಶ್‌ ಮತ್ತು ತಾರಕೇಶ್ವರಿ ರಾಥೋಡ್ ದಂಪತಿ ಕಳೆದ ವರ್ಷ ಮೇನಲ್ಲಿ ಎವರೆಸ್ಟ್ ಪರ್ವತವನ್ನು ತಾವು ಏರಿದ್ದು, ಈ ಪರ್ವತವನ್ನೇರಿದ ಪ್ರಥಮ ಭಾರತೀಯ ದಂಪತಿ ಎಂದು ಹೇಳಿಕೊಂಡಿದ್ದರು.

ಆದರೆ, ಪರ್ವತಾರೋಹಣ ಸಂಸ್ಥೆಯೊಂದು ದಿನೇಶ್‌ ಮತ್ತು ತಾರಕೇಶ್ವರಿ ರಾಥೋಡ್ ದಂಪತಿ ಎವರೆಸ್ಟ್‌ ಶಿಖರವನ್ನು ಏರಿಲ್ಲ. ಬೇರೆ ಚಿತ್ರಗಳನ್ನು ವಿರೂಪಗೊಳಿಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿತ್ತು.  ಹೀಗಾಗಿ ದಿನೇಶ್‌ ಮತ್ತು ತಾರಕೇಶ್ವರಿ ರಾಥೋಡ್ ದಂಪತಿ ಎವರೆಸ್ಟ್‌ ಶಿಖರ ಏರಿರುವ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಪೊಲೀಸರು ಈ ಬಗ್ಗೆ ಸತ್ಯಶೋಧನೆ ಸಮಿತಿಯನ್ನು ರಚಿಸಿದ್ದರು. ಅಲ್ಲದೇ, ಅದೇ ವರ್ಷ ನವೆಂಬರ್‌ನಲ್ಲಿ ಇಬ್ಬರನ್ನೂ ಅಮಾನತ್ತುಗೊಳಿಸಲಾಗಿತ್ತು.

ಇದೀಗ ಸತ್ಯಶೋಧನೆ ಸಮಿತಿಯು ತನಿಖಾ ವರದಿ ಸಲ್ಲಿಸಿದ್ದು, ದಿನೇಶ್‌ ಮತ್ತು ತಾರಕೇಶ್ವರಿ ರಾಥೋಡ್ ದಂಪತಿ ಎವರೆಸ್ಟ್‌ ಶಿಖರ ಸುಳ್ಳು ಎಂದು ಸಾಬೀತಾಗಿದೆ.  ಇನ್ನು, ದಿನೇಶ್‌ ಮತ್ತು ತಾರಕೇಶ್ವರಿ ರಾಥೋಡ್ ದಂಪತಿ ಎವರೆಸ್ಟ್‌ ಶಿಖರ ಏರಿದ್ದು ಸುಳ್ಳು ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ನೇಪಾಳ ಸರ್ಕಾರವು ಈ ದಂಪತಿಗೆ ನೇಪಾಳ ಪ್ರವೇಶಕ್ಕೆ 10 ವರ್ಷ ನಿರ್ಬಂಧ ವಿಧಿಸಿತ್ತು. ಜೊತೆಗೆ ಮಹಾರಾಷ್ಟ್ರ ಪೊಲೀಸರು ರಾಥೋಡ್ ದಂಪತಿ ಎವರೆಸ್ಟ್‌ ಶಿಖರ ಏರಿದ್ದ ಕುರಿತು ತನಿಖೆ ನಡೆಸುವಂತೆ ನೇಪಾಳ ಸರ್ಕಾರಕ್ಕೂ ಪತ್ರ ಬರೆದಿದ್ದರು.


ಸಂಬಂಧಿತ ಟ್ಯಾಗ್ಗಳು

ಸುಳ್ಳು ಹೇಳಿದ ಪೊಲೀಸ್ ಪೇದೆ ವಜಾ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ