ಅವ್ಯವಸ್ಥಿತ ಕೇಬಲ್‌ ಗಳ ವಿರುದ್ಧ ಸಮರ !

Kannada News

08-08-2017

ಬೆಂಗಳೂರು: ನಗರದ ಸೌಂದರ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ಸುವ್ಯವಸ್ಥಿತವಾದ ಫುಟ್‌ ಪಾತ್ ನಿರ್ಮಾಣ ಮಾಡುತ್ತಿದೆ.  ಆದರೇ ಕೇಬಲ್‌ ಗಳು ನಗರದ ಸೌಂದರ್ಯಕ್ಕೆ ಅಡ್ಡಿಯಾಗುತ್ತಿವೆ, ಹೀಗಾಗಿ ಕೇಬಲ್‌ ಗಳ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಅಧಿಕಾರಿಗಳು ಅಕ್ರಮವಾಗಿ ಅವ್ಯವಸ್ಥಿತವಾಗಿ ಅಳವಡಿಸಲಾಗುತ್ತಿರುವ ಕೇಬಲ್‌ ಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತೀಚಿಗಷ್ಟೇ ಬಿಬಿಎಂಪಿ ಕೋಟ್ಯಾಂತರ ರೂಪಾಯಿ ಅನುದಾನ ಬಳಸಿ ನಗರದ ಪ್ರಮುಖ ಏರಿಯಾಗಳಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ನಡೆಸಿದೆ. ಆದರೇ ನಗರದಲ್ಲಿ ಕೆಲಸ ಮಾಡುತ್ತಿರುವ ಹಲವು ಕಂಪನಿಗಳು ತಮ್ಮ ಕೇಬಲ್‌ ಗಳನ್ನು ಬೇಕಾಬಿಟ್ಟಿ ಹಾಕಿವೆ. ಇದನ್ನು ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳು ಸಂಬಂಧಿಸಿದ ಕಂಪನಿಗಳಿಗೆ ಸೂಚಿಸಿದ್ದರು. 

ಅಲ್ಲದೇ ನಗರದಲ್ಲಿ ಕೇಬಲ್ ಸರ್ವಿಸ್‌ ಗಳನ್ನು ಕೇವಲ ಕೊಳವೆ ಪೈಪ್‌ ಗಳ ಮೂಲಕವೇ ಅಳವಡಿಸಿಕೊಳ್ಳುವಂತೆ ಆದೇಶಿಸಲಾಗಿದೆ. ಆದರೂ ಕಂಪನಿಗಳು ತಲೆಕೆಡಿಸಿಕೊಳ್ಳದೇ ಬೇಕಾಬಿಟ್ಟಿಯಾಗಿ ಕೇಬಲ್‌ ಗಳನ್ನು ಹಾಕಿದ್ದವು. ಹೀಗಾಗಿ ಬಿಬಿಎಂಪಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ