ಮೈಸೂರು ದಸರಾ: ಆರಂಭದಲ್ಲೇ ಗೊಂದಲ..?

Kannada News

08-08-2017

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2017 ಕ್ಕೇ, ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹಿಗಿರುವಾಗ, ದಸರಾ ಗಜಪಯಣ ದಿನಾಂಕ ಸಂಬಂಧ,  ಮೈಸೂರು ಜಿಲ್ಲಾಡಳಿತದಲ್ಲಿ ಗೊಂದಲ ಮುಂದುವರೆದಿದೆ. ದಸರಾ ಗಜಪಯಣ ದಿನಾಂಕವನ್ನು ಮತ್ತೆ ಬದಲಿಸಿದ್ದೂ, ಇದೀಗ ಆಗಸ್ಟ್ 12ಕ್ಕೆ ಗಜಪಯಣ ಸಮಾರಂಭ ನಿಗದಿ ಮಾಡಿದ್ದಾರೆ. ಇದಕ್ಕೂ ಮೊದಲು ಆಗಸ್ಟ್ 10 ಕ್ಕೆ ಗಜಪಯಣ ಎಂದು ತಿಳಿಸಿದ್ದ ಜಿಲ್ಲಾಡಳಿತ, ಆ ಬಳಿಕ ದಿನಾಂಕ ಬದಲಿಸಿ ಆಗಸ್ಟ್ 14ಕ್ಕೆ ಗಜಪಯಣ ಎಂದು ತಿಳಿಸಿತ್ತು. ಆದರೆ ಇದೀಗ ಮತ್ತೆ ದಿನಾಂಕ ಬದಲಿಸಿ ಆಗಸ್ಟ್ 12ಕ್ಕೆ ಗಜಪಯಣ ಸಮಾರಂಭ ನಿಗದಿ ಮಾಡಿದೆ. ಈ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆರಂಭದಲ್ಲೇ ಅಧಿಕಾರಿ ವರ್ಗ ಗೊಂದಲ ಸೃಷ್ಟಿಸಿದೆ. ಮತ್ತೆ ದಿನಾಂಕ ಬದಲಾಗದಿದ್ದಲ್ಲಿ, ಆಗಸ್ಟ್ 12ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ, ವೀರನಹೊಸಳ್ಳಿ ಸಮೀಪವಿರುವ, ನಾಗಪುರ ಗಿರಿಜನ ಹಾಡಿ ಬಳಿ ಗಜಪಯಣ ನಡೆಯಲಿದೆ. ಮೊದಲ ತಂಡದಲ್ಲಿ ಗಜಪಡೆಯ ನಾಯಕ ಅರ್ಜುನನ ಜೊತೆಗೆ ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ, ಕಾವೇರಿ ಸೇರಿದಂತೆ ಒಟ್ಟು ಎಂಟು ಆನೆಗಳು ಮೈಸೂರಿಗೆ ಆಗಮಿಸಲಿವೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ