ಶ್ರೀಗಂಧ ಮರಗಳ್ಳರ ಬಂಧನ !

Kannada News

08-08-2017

ಉತ್ತರ ಕನ್ನಡ: ನಾಲ್ವರು ಶ್ರೀಗಂಧ ಮರ ಕಳ್ಳರನ್ನು ಅರಣ್ಯ ಅಧಿಕಾರಿಗಳು ದಾಳಿ ನಡೆಸಿ, ಮಾಲು ಸಹಿತ ಬಂಧಿಸಿ ಕಾನೂನು ಕ್ರಮ ಜರುಗಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ತಾಲ್ಲೂಕಿನ ಕಡವೆ ಬಳಿ ಎರಡು ಬೈಕ್‍ ಗಳಲ್ಲಿ 25 ಕೆ.ಜಿ ಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ದಾಳಿ ವೇಳೆ ಬಂಧಿಸಲಾಗಿದೆ. ಸತೀಶ ಮರಾಠೆ ದೇವದಕೇರಿ, ನಾಗರಾಜ ಮರಾಠೆ ಮಲೇನಳ್ಳಿ, ದಾಮೋದರ ಮರಾಠೆ ದೇವದಕೇರಿ, ಕೃಷ್ಣಾ ಮರಾಠೆ ದೇವದಕೇರಿ ಬಂಧಿತ ಆರೋಪಿಗಳು, ದಾಳಿಯಲ್ಲಿ 18 ತುಂಡುಗಳ ಸಹಿತ 25 ಕೆ.ಜಿ.ಗಂಧವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಗಂಧ ಸಾಗಾಣಿಕೆಗೆ ಬಳಸಲಾಗಿದ್ದ  ದ್ವಿಚಕ್ರ ವಾಹನಗಳನ್ನೂ ಸಹ ವಶಕ್ಕೆಪಡೆದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ