ಮನೆ ಖಾಲಿ ಮಾಡಿಸಲು ಗೂಬೆ ತಂತ್ರ !

Kannada News

07-08-2017

ಬೆಂಗಳೂರು: ಗೂಬೆ ಅಪಶಕುನದ ಸಂಕೇತ, ಅದನ್ನು ನೋಡಬಾರದು ಎಂಬುದು ಬಹುತೇಕರ ನಂಬಿಕೆ. ಅದರಲ್ಲೂ ಗೂಬೆ ಮನೆಯೊಳಗೆ ಬಂದರೆ ಮನೆಯನ್ನೇ ಖಾಲಿ ಮಾಡುತ್ತಾರೆ. ಜನರ ಇದೇ ನಂಬಿಕೆಯನ್ನು ಉಪಯೋಗಿಸಿ ವಿವಾದಿತ ಮನೆಯನ್ನು ಖಾಲಿ ಮಾಡಲು ಸಂಚು ರೂಪಿಸಿದ್ದ ಸಾಫ್ಟ್ ವೇರ್ ಎಂಜಿನಿಯರ್ ಸೇರಿ ಐವರನ್ನು ಕಾಟನ್‍ ಪೇಟೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಮೂಲದ ಟೆಖಿ ಮನಮೋಹನ್ ವಿವಾದಿತ ಮನೆಯೊಂದನ್ನು ಖಾಲಿ ಮಾಡಿಸಲು ಗೂಬೆಯನ್ನು ಬಳಸಲು ಪ್ಲಾನ್ ರೂಪಿಸಿದ್ದ. ಅದಕ್ಕಾಗಿ ಹುಣಸೂರಿನ ಅರಣ್ಯದಲ್ಲಿ ಗೂಬೆಯೊಂದನ್ನು ಹಿಡಿದು ತಂದು ಕಾಟನ್‍ ಪೇಟೆಯ, ಗೆಸ್ಟ್ ಹೌಸ್‍ ವೊಂದರಲ್ಲಿ ಕೂಡಿಹಾಕಿದ್ದ. ತನ್ನ ಕೆಲಸ ಮುಗಿದ ನಂತರ ಗೂಬೆಯನ್ನು 2.5 ಲಕ್ಷ ರೂ.ಗೆ ಮಾರಲು ಯೋಜನೆ ರೂಪಿಸಿದ್ದ.

ಖಚಿತ ಮಾಹಿತಿಯನ್ನು ಆಧರಿಸಿ ಸಿಐಡಿ ಅರಣ್ಯ ಘಟಕದ ಪೊಲೀಸರು ಕಾರ್ಯಾಚರಣೆ ನಡೆಸಿ ಟೆಖಿ ಮತ್ತು ಆತನಿಗೆ ಸಹಕರಿಸಿದ ಮುದೀರ್ ಬಶಿತ್ ಸಲೀಂ, ಜುಬೇರ್‍ ನನ್ನು ಬಂಧಿಸಿದ್ದು, ಗೂಬೆಯನ್ನು ವಶಪಡಿಸಿಕೊಂಡಿದ್ದಾರೆ. ಕಾಟನ್‍ಪೇಟೆ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ