ಪತ್ನಿಗೆ ಮದ್ಯ ಕುಡಿಸಿ, ವಿಕೃತ ಮಿಲನಕ್ಕೆ ಒತ್ತಾಯ !

Kannada News

07-08-2017 684

ಬೆಂಗಳೂರು: ಮದ್ಯ ಕುಡಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಬಹುರಾಷ್ಟ್ರೀಯ ಕಂಪನಿಯಾ ಮ್ಯಾನೇಜರ್ ಆಗಿದ್ದ, ಪತಿಯ ವಿಚಿತ್ರ ಚಟದಿಂದ ಬೇಸತ್ತ ಪತ್ನಿಯು ರಾಜ್ಯ ಮಹಿಳಾ ಆಯೋಗದ ಹಾಗೂ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಪತಿ ಕೃಷ್ಣಕುಮಾರ್ ವರ್ತನೆಯ ವಿರುದ್ಧ ಪತ್ನಿ ವಿನಿತಾ(ಹೆಸರು ಬದಲಾಯಿಸಲಾಗಿದೆ)ಎಂಬ ಮಹಿಳೆ ಪತಿಯ ವಿಚಿತ್ರ ವರ್ತನೆ ತೋರಿ ಮನೆಯಿಂದ ಹೊರಹಾಕಿದ್ದಾರೆ ಎಂದು, ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿರುವುದಲ್ಲದೇ, ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಕೃಷ್ಣಕುಮಾರ್ ಪತಿಯ ಆರೋಪವನ್ನು ನಿರಾಕರಿಸಿದ್ದಾರೆ.

ಮ್ಯಾಟ್ರಿಮೋನಿಯಲ್ಲಿ ಪ್ರಪೋಸ್ ಮಾಡಿ ಕಳೆದ ವರ್ಷ ಜೂನ್‍ ನಲ್ಲಿ ಮೈಸೂರಿನಲ್ಲಿ ವಿನಿತಾ ಅವರನ್ನು ಅಸೆಂಚರ್ ಕಂಪನಿಯಲ್ಲಿ ಮ್ಯಾಜೇಜರ್ ಆಗಿದ್ದ ಕೃಷ್ಣಕುಮಾರ್ ಮದುವೆಯಾಗಿದ್ದರು. ಮದುವೆ ನಂತರ ಪತ್ನಿಯನ್ನು, ಹನಿಮೂನ್ ಗೆಂದು ಮಾರಿಷಸ್‍ ಗೆ, ಕರೆದುಕೊಂಡು ಹೋಗಿದ್ದ. ಕೃಷ್ಣಕುಮಾರ್ ಅಲ್ಲಿ ಆಕೆಗೆ ಮದ್ಯಪಾನ ಮಾಡಿಸಿ ನಂತರ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಮದ್ಯಪಾನ ಮಾಡದಿದ್ದರೆ ತನಗೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲವೆಂದು ಹೇಳಿ ಬಲವಂತವಾಗಿ ಕುಡಿಸಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇದಲ್ಲದೆ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ತನ್ನ ಮೊಬೈಲ್‍ ನಲ್ಲಿ ಚಿತ್ರೀಕರಿಸಿಕೊಂಡು ನೀನು ನನ್ನ ಮಾಜಿ ಗೆಳತಿಯಂತೆ ಇದ್ದೀಯಾ, ನಾನು ನಿನ್ನನ್ನು ಆ ಹೆಸರಿನಿಂದಲೇ ಕರೆಯುತ್ತೇನೆ. ನಿನ್ನನ್ನು ನೋಡಿದರೆ ಆಕೆಯನ್ನು ನೋಡಿದಂತೆಯೇ ಆಗುತ್ತದೆ' ಎಂದು ಹೇಳುತ್ತಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ. ಹನಿಮೂನ್ ಮುಗಿಸಿಕೊಂಡು ವಿಜಯನಗರದ ಮನೆಗೆ ಬಂದ ನಂತರವೂ ಪ್ರತಿರಾತ್ರಿ ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದ. ಬಲವಂತವಾಗಿ ತನಗೆ ಮದ್ಯಪಾನ ಮಾಡಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನನ್ನ ಜೀವನದಲ್ಲಿ ತಾನು ಎಂದಿಗೂ ಮದ್ಯಪಾನ ಮಾಡದಿದ್ದರೂ ಗಂಡ ಬಲವಂತವಾಗಿ ಕುಡಿಸಿ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇದು ನನಗೆ ಹಿಂಸೆಯಾಗುತ್ತಿತ್ತು ಎಂದು ಮಹಿಳೆ ತನ್ನ ದೂರಿನಲ್ಲಿ ನೋವು ತೋಡಿಕೊಂಡಿದ್ದಾಳೆ.

ಇದನ್ನು ಪ್ರತಿರೋಧಿಸಿದಾಗ ತನಗೆ ಗಂಡನ ಮನೆಯವರು ಕಿರುಕುಳ ನೀಡಿ ವರದಕ್ಷಿಣೆಗಾಗಿ ಪೀಡಿಸಿದ್ದಾರೆ. ಪದೇ ಪದೇ ಹಣ ತರುವಂತೆ ಕಿರುಕುಳ ಕೊಟ್ಟಿದ್ದಾರೆ. ಮದುವೆ ವೇಳೆಯಲ್ಲಿ ಎಂಟು ನೂರು ಗ್ರಾಂ ಚಿನ್ನಾಭರಣ ಮತ್ತು 20 ಲಕ್ಷ ರೂ. ಹಣವನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಆ ನಂತರವೂ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಗಂಡ ಮತ್ತು ಆತನ ಮನೆಯವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆ ತನ್ನ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಈ ಸಂಬಂಧ ವಿಜಯ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ