ಎರಡು ಬಸ್ ಮಧ್ಯೆ ವ್ಯಕ್ತಿ ಸಿಲುಕಿ ಸಾವು !

Kannada News

07-08-2017

ಬೆಂಗಳೂರು: ನಗರದ ಸಿಟಿ ಮಾರುಕಟ್ಟೆಯ ಜಂಕ್ಷನ್ ಬಳಿ ಇಂದು ಬೆಳಿಗ್ಗೆ ಎರಡು ಬಿಎಂಟಿಸಿ ಬಸ್‍ ಗಳ ನಡುವೆ ಸಿಕ್ಕಿ ಹಾಕಿಕೊಂಡು, ಕೆಲಸಕ್ಕೆ ಹೋಗುತ್ತಿದ್ದ ಸೆಕ್ಯೂರಿಟಿ ಗಾರ್ಡ್ ರಂಗಸ್ವಾಮಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಶ್ರೀನಗರದ ಸೆಕ್ಯೂರಿಟಿ ಗಾರ್ಡ್ ರಂಗಸ್ವಾಮಿ (55) ಬೆಳಿಗ್ಗೆ 8.15ರ ವೇಳೆ ಕೆಲಸಕ್ಕೆ ಹೋಗಲು ಸಿಟಿ ಮಾರುಕಟ್ಟೆ ಜಂಕ್ಷನ್ ಬಳಿ ರಸ್ತೆ ದಾಟಲು ಹೋಗುತ್ತಿದ್ದಾಗ ಬಿಎಂಟಿಸಿ ಬಸ್ಸೊಂದು ನಿಂತಿದ್ದು, ಅದರ ಬಳಿ ನಿಂತಿದ್ದಾರೆ. ಈ ವೇಳೆ ಬಂದ ಮತ್ತೊಂದು ಬಸ್ ಬಲಗಡೆಯಿಂದ ಓವರ್ ಟೇಕ್  ಮಾಡಲು ಹೋಗಿ ಉಜ್ಜಿಕೊಂಡು ಹೋಗಿದ್ದು, ಮಧ್ಯೆ ಸಿಲುಕಿದ್ದ ರಂಗಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅಪಘಾತವೆಸಗಿದ ಬಿಎಂಟಿಸಿ ಚಾಲಕ ಚಂದ್ರಶೇಖರ್ ನನ್ನು ಬಂಧಿಸಿ ವಿ.ವಿ.ಪುರಂ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ