ಚಿನ್ನದ ಸರ ಕಸಿದು ಪರಾರಿ !

Kannada News

07-08-2017

ಬೆಂಗಳೂರು: ವಿಳಾಸ ಕೇಳುವ ನೆಪಮಾಡಿ ಮಹಿಳೆಯೊಬ್ಬರ  2 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಬೈಕ್‍ ನಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ಘಟನೆ, ನಗರದ ಕುರುಬರಹಳ್ಳಿಯಲ್ಲಿ ನಡೆದಿದೆ. ಕುರುಬರಹಳ್ಳಿಯ ಲಲಿತಮ್ಮ (64) ಅವರು ರಾತ್ರಿ 9.45 ರ ವೇಳೆ ಮನೆಯ ಹತ್ತಿರದ ಅಂಗಡಿಗೆ ಹೋಗಿ ವಾಪಸ್ ನಡೆದುಕೊಂಡು ಮನೆಗೆ ಬರುತ್ತಿದ್ದಾಗ, ಹಿಂದಿನಿಂದ ಬೈಕ್‍ ನಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪ ಮಾಡಿದ್ದಾರೆ. ವಿಳಾಸ¸ ಹೇಳಲು ಕೈ ತೋರಿಸುತ್ತಿದ್ದಾಗ ತಕ್ಷಣವೇ ಅವರ ಕತ್ತಿನಲ್ಲಿದ್ದ 64 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಕಪ್ಪುಬಣ್ಣದ ಪಲ್ಸರ್ ಬೈಕ್‍ ನಲ್ಲಿ ಬಂದಿದ್ದು, ಪ್ರಕರಣ ದಾಖಲಿಸಿರುವ ಮಹಾಲಕ್ಷ್ಮಿಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ