ಹುಡುಗಿಯರ ಫೋಟೋ ತೋರಿಸಿ ವಂಚನೆ !

Kannada News

07-08-2017 612

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಇಬ್ಬರನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಎಕ್ಕೂರಿನ ಕುಲದೀಪ್, ಫರಂಗಿಪೇಟೆಯ ಕೀರ್ತನ್ ಬಂಧಿತ ಆರೋಪಿಗಳು. ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ಆಮಿಷ ಒಡ್ಡುತ್ತಿದ್ದ ಎನ್.ಆರ್.ಐ ತಂಡವು ಹೆಚ್ಚಾಗಿ ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದರು. ಮುಂಗಡವಾಗಿ ಹಣ ಪೂರೈಸಿದರೆ, ಸಪ್ಲೈಮಾಡುವ ಭರವಸೆ ನೀಡುತ್ತಿದ್ದರಿಂದ ಕೆಲವರು ಹಣ ಕಳಿಸುತ್ತಿದ್ದರು. ಹೀಗಾಗಿ ಈ ತಂಡದ ಸದಸ್ಯರು ತಾವು ಫಾರಿನ್ ಏಜನ್ಸಿ ಅಂತಾ ಹೇಳಿಕೊಂಡು ಆನ್ ಲೈನಲ್ಲಿ ಹಣ ಕಳುಹಿಸಲು ಹೇಳುತ್ತಿದ್ದರು. ಒಂದಷ್ಟು ಹಣ ಪಾವತಿಸಿದ ಬಳಿಕ ಸಂಪರ್ಕ ಕಡಿತಗೊಳಿಸಿ ಮೋಸ ಮಾಡುತ್ತಿದ್ದರು. ಒಂದೂವರೆ ವರ್ಷದಿಂದ ಈ ಮೋಸದ ಜಾಲ ನಡೆಯುತ್ತಿದ್ದರೂ ಮರ್ಯಾದೆಗೆ ಅಂಜಿ ಯಾರೂ ದೂರು ನೀಡಿರಲಿಲ್ಲ. ಹೀಗಾಗಿ ಈ ತಂಡದಲ್ಲಿ ಇನ್ನೂ ಮೂವರಿದ್ದು ತಲೆಮರೆಸಿಕೊಂಡಿದ್ದಾರೆ. ಇದೀಗ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ