ಪತಿಯ ಅನೈತಿಕ ಸಂಬಂಧ: ಪತ್ನಿ ಆತ್ಮಹತ್ಯೆ !

Kannada News

07-08-2017 572

ಮೈಸೂರು: ಗಂಡ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ, ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಮೈಸೂರಿನಲ್ಲಿ ನಡೆದಿದೆ. ಲೇಖನ (25) ಆತ್ಮಹತ್ಯೆಗೆ ಮಾಡಿಕೊಂಡ ಮಹಿಳೆ. ಮೈಸೂರಿನ ಟಿ.ಕೆ ಲೇಔಟ್ ನ ನಿವಾಸದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಲೇಖನ ಅವರ ಪತಿಯಾದ ಬಸವರಾಜುವಿಗೆ ಇನ್ನೊಂದು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೂ, ಈ ಕುರಿತು ಲೇಖನ, ನಗರದ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಿನ್ನೆ ನಜರ್ ಬಾದ್ ಪೊಲೀಸರು, ಲೇಖನ ರವರನ್ನು ಕರೆಸಿ ಈ ಬಗ್ಗೆ ವಿಚಾರಣೆ ನಡೆಸಿದ್ದರು. ಠಾಣೆಯಿಂದ ಬಂದ ನಂತರ, ಲೇಖನ ಕಳೆದ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲೇಖನ ಮತ್ತು ಬಸವರಾಜು ಅವರಿಗೆ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಬಸವರಾಜು ಪೋಷಕರು ಲೇಖನಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಮೃತ ಲೇಖನಾಳ ಪೋಷಕರು ದೂರಿದ್ದಾರೆ. ಇನ್ನು ಲೇಖನ ಅವರನ್ನು ಕಳೆದುಕೊಂಡ ಪೋಷಕರ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ. ವಿಷಯ ತಿಳಿದ ಸರಸ್ವತಿಪುರಂ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ