ಬೈಕ್-ಟೆಂಪೋ ಡಿಕ್ಕಿ ಇಬ್ಬರ ದುರ್ಮರಣ !

Kannada News

07-08-2017

ಉತ್ತರ ಕನ್ನಡ: ಬೈಕ್ ಮತ್ತು ಟೆಂಪೋ ನಡುವೆ ಅಪಫಾತ ಸಂಭವಿಸಿದ್ದೂ, ಬೈಕ್ ಸವಾರ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ. ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮಾವಿನಕಟ್ಟೆ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಅಪಘಾತದಲ್ಲಿ, ಹನುಮಂತ ಕಲ್ಲಪ್ಪ ವಾಲೇಕರ್ ಮತ್ತು ಮಂಜುನಾಥ ಬಸನಗೌಡ, ಮೃತಪಟ್ಟಿದ್ದಾರೆ. ಇವರು, ಧಾರವಾಡ ಮೂಲದವರು ಎಂದು ತಿಳಿದು ಬಂದಿದೆ. ಟೆಂಪೋ ಮುರ್ಡೇಶ್ವರದಿಂದ ಭಟ್ಕಳ ಕಡೆ ಬರುತ್ತಿದ್ದೂ, ಬೈಕ್ ಸವಾರ ಉಡುಪಿಯಿಂದ ಕಲಘಟಗಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ