ಮಚ್ಚಿನಿಂದ ಕೊಚ್ಚಿ ಭೀಕರ ಕೊಲೆ !

Kannada News

05-08-2017

ಬೆಂಗಳೂರು: ತಲಘಟ್ಟಪುರದ ಬಿಡಿಎ ಲೇಔಟ್ ನ ಖಾಲಿ ನಿವೇಶನಗಳ ಬಳಿಯಲ್ಲಿ ಶುಕ್ರವಾರ ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಾ ಕುಳಿತಿದ್ದ ಹಣ್ಣಿನ ವ್ಯಾಪಾರಿ ರಹಮತ್‍ವುಲ್ಲಾ ನನ್ನು ಏಕಾಎಕಿ ಬಂದ ಐವರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆಮಾಡಿದ್ದಾರೆ. ಆವಲಹಳ್ಳಿಯಲ್ಲಿ  ಹಣ್ಣಿನ ವ್ಯಾಪಾರ ಮಾಡುತ್ತಿದ್ದ ರಹಮತ್‍ವುಲ್ಲಾ (32) ರಾತ್ರಿ 10 ರ ವೇಳೆ ಇಬ್ಬರು ಸ್ನೇಹಿತರ ಜೊತೆ ಬಿಡಿಎ ಲೇಔಟ್‍ ನ ಖಾಲಿ ನಿವೇಶನ ಬಳಿ ಪಾರ್ಟಿ ಮಾಡಲು ಹೋಗಿದ್ದರು. ಪಾರ್ಟಿ ಮಾಡುತ್ತ ಮದ್ಯ ಸೇವಿಸುವ ವೇಳೆ ಚಿಕನ್ ಕಬಾಬ್ ತರಲು ಜೊತೆಯಲ್ಲಿದ್ದ ಒಬ್ಬನನ್ನು ಕಳುಹಿಸಿ ರೆಹಮತ್‍ವುಲ್ಲಾ ಸೇರಿ ಇಬ್ಬರು ಕುಡಿಯುತ್ತ ಕುಳಿತಿದ್ದರು.

ಈ ವೇಳೆ ಮಚ್ಚಿಡಿದು ಅಲ್ಲಿಗೆ ಬಂದ ಐವರು ದುಷ್ಕರ್ಮಿಗಳು ಜೊತೆಗಿದ್ದ ಸ್ನೇಹಿತನನ್ನು ಬೆದರಿಸಿ ದೂರ ಕಳುಹಿಸಿ ರಹಮತ್‍ವುಲ್ಲಾನ ಕತ್ತು, ಎಡಗಾಲು ಇನ್ನಿತರ ಭಾಗಗಲಿಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ತಲಘಟ್ಟಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಕೊಲೆಗೆ ಕಾರಣಗಳು ತಿಳಿದು ಬಂದಿಲ್ಲ. ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಎಸ್.ಡಿ ಶರಣಪ್ಪ ತಿಳಿಸಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ