118 ಅತ್ಯಾಚಾರ ಎಸಗಿದ ದುಷ್ಟ ವೈದ್ಯ !

Kannada News

05-08-2017

118 ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ ಹಾಗೂ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಕೋರ್ಟ್, ಭಾರತೀಯ ಮೂಲದ ವೈದ್ಯ ಮನೀಷ್ ಷಾ ನನ್ನು ದೋಷಿ ಎಂದು ತೀರ್ಪು ನೀಡಿದೆ. ಆರೋಪಿ 2004ರಿಂದ 2013 ರ ಮಧ್ಯೆ 118 ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ್ದ. ಎಂದು 2013ರಲ್ಲಿ ವೈದ್ಯನನ್ನು ಬಂಧಿಸಲಾಗಿತ್ತು. ಸದ್ಯ ವೈದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. ವೈದ್ಯ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಮುಂದಿನ ವಿಚಾರಣೆ  ಆಗಸ್ಟ್ 31ರಂದು ನಡೆಯಲಿದೆ. ಘಟನೆ ನಡೆದಿರುವುದು ಪೂರ್ವ ಲಂಡನ್ ನ ರೋಮ್ಪೊರ್ಟ್ ನಲ್ಲಿ. ಭಾರತೀಯ ಮೂಲದ ಆರೋಪಿ ಮನೀಷ್ ಷಾ ವೃತ್ತಿಯಲ್ಲಿ ವೈದ್ಯನಾಗಿದ್ದು, ಈತನ ವಿರುದ್ಧ 118 ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. 65 ಹುಡುಗಿಯರನ್ನು ರೇಪ್ ಮಾಡಿರುವ ವೈದ್ಯ 52 ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನಂತೆ. 13 ವರ್ಷದ ಅಪ್ರಾಪ್ತೆಯನ್ನೂ ರೇಪ್ ಮಾಡಿದ್ದಾನೆ ಮನೀಷ್. 2013ರಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅನೇಕ ಬಾರಿ ಜಾಮೀನಿನ ಮೇಲೆ ಆರೋಪಿ ಹೊರಗೆ ಬಂದಿದ್ದ. ಇದೀಗ ಕೋರ್ಟ್ ದೋಷಿ ಎಂದಿ ತೀರ್ಪು ನೀಡಿದ್ದು ಬಂಧನದ ಭೀತಿಯಲ್ಲಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

118 ಅತ್ಯಾಚಾರ ಎಸಗಿದ ದುಷ್ಟ ವೈದ್ಯ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ