ಶಿಶುವನ್ನು ಮಾರಿ ಆಸ್ಪತ್ರೆ ಬಿಲ್ ಕಟ್ಟಿದರು !

Kannada News

05-08-2017

ಭುವನೇಶ್ವರ್: ಆಸ್ಪತ್ರೆಯ ವೆಚ್ಚ ಕಟ್ಟಲು ಹಣವಿಲ್ಲದ ಕಾರಣಕ್ಕೆ ಪೋಷಕರು ತಮ್ಮ ನವಜಾತ ಶಿಶುವೊಂದನ್ನು ಮಾರಾಟ ಮಾಡಿರುವ ಘಟನೆಯೊಂದು ಒಡಿಶಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.  ನಿರಾಕರ್ ಮೊಹರಾನ, ಗೀತಾರಾಣಿ ಮೊಹರಾನ ನವಜಾತ ಶಿಶುವನ್ನು ಮಾರಾಟ ಮಾಡಿದ ದಂಪತಿಗಳಾಗಿದ್ದಾರೆ. ಗೀತಾರಾಣಿ ಸೋಮವಾರ ಮೂರನೇ ಮಗುವಿಗೆ ಜನ್ಮ ನೀಡಿದ್ದರು.  ಹೆರಿಗೆ ನೋವು ಕಾಣಿಕೊಂಡ ಕಾರಣ  ಗೀತಾರಾಣಿಯವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಮಾಡಲು ಸಮಸ್ಯೆಗಳಿರುವುದರಿಂದ ಕೆಂದ್ರಾಪರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬಳಿಕ ನಿರಾಕರ್ ಅವರು ಪತ್ನಿಯನ್ನು ಖಾಸಗಿ ನರ್ಸಿಂಗ್ ಹೋಂನಲ್ಲಿ ದಾಖಲು ಮಾಡಿಸಿ ಹೆರಿಗೆ ಮಾಡಿದ್ದಾರೆ.

ಆಸ್ಪತ್ರೆಯ ಒಟ್ಟಾರೆ ವೆಚ್ಚ ರೂ.75,000 ಆಗಿದೆ. ಆದರೆ, ದಂಪತಿಗಳು ಕಡು ಬಡತನದಲ್ಲಿರುವುದರಿಂದಾಗಿ ಆಸ್ಪತ್ರೆಯ ವೆಚ್ಚ ಭರಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈ ವೇಳೆ ಮಗುವನ್ನು ರೂ.12 ಸಾವಿರಕ್ಕೆ ಮಾರಾಟ ಮಾಡಿ ಆಸ್ಪತ್ರೆಯ ವೆಚ್ಚ ಭರಿಸಲು ಒಪ್ಪಿದ್ದಾರೆ.  ಮಗುವನ್ನು ಮಾರಾಟ ಮಾಡಿದ ಬಳಿಕ ಗ್ರಾಮಕ್ಕೆ ಬಂದ ದಂಪತಿಗಳು ವಿಚಾರವನ್ನು ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ. ನಂತರ ಪೋಷಕರು ನರ್ಸಿಂಗ್ ಹೋಂ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. 

 



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ