ಪಾಕಿಸ್ತಾನದಲ್ಲಿ ಹಿಂದೂ ಸಚಿವ !

Kannada News

05-08-2017

ಪಾಕಿಸ್ತಾನದಲ್ಲಿ ಹಿಂದೂ ಸಚಿವ !

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್ ಶರೀಫ್ ಕೆಳಗಿಳಿದ ನಂತರ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹಿಂದೂ ಸಂಸದರೊಬ್ಬರು ಪಾಕಿಸ್ತಾನದ ಸಚಿವರಾಗಿ ಅಧಿಕಾರ ಸ್ವಿಕಾರ ಮಾಡಿದ್ದಾರೆ. ಪಾಕಿಸ್ತಾನ ಪ್ರಧಾನಿಯಾಗಿ ಶಾಹಿದ್ ಖಖಾನ್ ಅಬ್ಬಾಸಿ ಅಧಿಕಾರ ವಹಿಸಿಕೊಂಡಿದ್ದು, ಅವರ ಸಂಪುಟದಲ್ಲಿ 47 ಸಚಿವರಿದ್ದಾರೆ. ಅಧ್ಯಕ್ಷರ ಭವನದಲ್ಲಿ ನಡೆದ ಸಮಾರಂಭದಲ್ಲಿ 28 ಫೆಡರಲ್ ಸಚಿವರು, 19 ಸಹಾಯಕ ಸಚಿವರಿಗೆ ಅಧ್ಯಕ್ಷ ಮಮ್ನೂನ್ ಹುಸೇನ್ ಪ್ರಮಾಣ ವಚನ ಬೋಧಿಸಿದ್ದಾರೆ. ನೂತನ ಸಂಪುಟದಲ್ಲಿ 2 ದಶಕದ ಬಳಿಕ ಹಿಂದೂ ಸಚಿವರೊಬ್ಬರು ಕಾಣಿಸಿಕೊಂಡಿದ್ದಾರೆ. 65 ವರ್ಷದ ದರ್ಶನ್ ಲಾಲ್, ಸಿಂಧ್ ಪ್ರಾಂತ್ಯದ ಘೋಟ್ಕಿ ಮೀರ್ ಪುರ್ ಮ್ಯಾಥೆಲೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಅವರು ಸಂಪುಟಕ್ಕೆ ಸೇರಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ