ರೈಲಿಗೆ ತಲೆಕೊಟ್ಟ ವಿದ್ಯಾರ್ಥಿ !

Kannada News

05-08-2017 552

ಮಂಡ್ಯ: ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ. ಅಮೃತ್ ಹೆಚ್.ಎಸ್.(18) ಮೃತ ವಿದ್ಯಾರ್ಥಿ. ಕೆ.ಆರ್.ಪೇಟೆ ತಾಲ್ಲೂಕಿನ ಹೆಚ್.ಶೆಟ್ಟಿಹಳ್ಳಿಯ ಅಮೃತ್, ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ, ದ್ವಿತೀಯ ಪಿಯುಸಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಶ್ರೀರಂಗಪಟ್ಟಣ ಪಾಂಡವಪುರ ನಡುವಿನ ರೈಲ್ವೇ ನಿಲ್ದಾಣದ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದೂ,  ಘಟನೆಯಲ್ಲಿ ಮೃತನ ರುಂಡ ಮತ್ತು ದೇಹ ತುಂಡಾಗಿ ಬೇರ್ಪಟ್ಟಿದೆ. ಮಂಡ್ಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ