ನಾನು ಕಾನೂನು ಉಲ್ಲಂಘನೆ ಮಾಡಿಲ್ಲ..?

Kannada News

05-08-2017

ಬೆಂಗಳೂರು: ಐಟಿ ದಾಳಿಯ ನಂತರ ಮೊದಲ ಬಾರಿಗೆ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ, ಇದೇ ಮೊದಲು ಬಾರಿ ಮನೆಯಿಂದ ಹೊರಗಡೆ ಬಂದು ಮಾತನಾಡಿದ ಅವರು ನಾನು ಯಾರಿಗೂ ಕಿವಿಯಲ್ಲಿ ಹೂವು ಇಟ್ಟು ಬಂದಿಲ್ಲ, ನಾನು ಹಳ್ಳಿಯಿಂದ ಬಂದವನು, ಯಾರನ್ನೂ ಮೋಸ ಮಾಡಿ ರಾಜಕಾರಣ ಮಾಡಿಲ್ಲ, ಶೀಘ್ರದಲ್ಲೇ ನಾನು ಮತ್ತೆ ಮಾದ್ಯಮಗಳ ಮುಂದೆ ಬರ್ತೀನಿ. ನೀವು ಏನೆಲ್ಲ ತೋರಿಸಿದ್ದೀರಿ ಅದೆಲ್ಲಕ್ಕೂ ಉತ್ತರ ಕೊಡುತ್ತೇನೆ, ನಾನು ಮಾತನಾಡುವುದಿಲ್ಲ, ಆದರೆ ದಾಖಲೆಗಳನ್ನು ಹಿಡಿದು ಬರುತ್ತೇನೆ, ದಾಖಲೆಗಳ ಮೂಲಕವೇ ನಾನು ಎಲ್ಲರಿಗೂ ಉತ್ತರ ಕೊಡ್ತೇನೆ ಎಂದರು. ನಾನು ಯಾವುದೇ ರೀತಿ ಕಾನೂನು ಉಲ್ಲಂಘನೆ ಮಾಡಿಲ್ಲ. ಈಗ ನಾನು ನಂಬಿರುವ ದೇವರ ದರ್ಶನಕ್ಕೆ ತೆರಳುತ್ತಿದ್ದೀನಿ. ನಂತರ ನನ್ನ ಶಾಸಕರನ್ನು ಭೇಟಿ ಮಾಡ್ತೀನಿ ಎಂದು, ಪರೋಕ್ಷವಾಗಿ ಗುಜರಾತ್ ಶಾಸಕರನ್ನು ನನ್ನ ಶಾಸಕರು ಎಂದಿದ್ದಾರೆ. ಅಲ್ಲದೇ ಈಗ ಎಲ್ಲಾ ಅಧಿಕಾರಿಗಳು ಶೋಧ ಕಾರ್ಯ ಮುಗಿಸಿ, ಹೊರ ನಡೆದಿದ್ದಾರೆ. ನನ್ನ ಮನೆಯ ಶೋಧ ‌ಮುಗಿದಾಗಿದೆ. ಇನ್ನು ಬೇರೆ ಬೇರೆಕಡೆ ಶೋಧ ನಡೆಸಲಿ ಅಭ್ಯಂತರವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ