ಸರಣಿ ಕಳ್ಳತನ ಲಕ್ಷಾಂತರ ಹಣ ಕೊಳ್ಳೆ !

Kannada News

05-08-2017

ಮೈಸೂರು: ಮೈಸೂರಿನಲ್ಲಿ ಸರಣಿ ಕಳ್ಳತನ ನಡೆದಿದ್ದೂ, ಶಿವರಾಂಪೇಟೆಯಲ್ಲಿರುವ ಐದು ಮಳಿಗೆಳಿಗೆ ಕನ್ನ ಹಾಕಿರುವ ಕಳ್ಳರು, ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಮಳಿಗೆಗಳ ಮಾಲೀಕರು ಇಂದು ಬೆಳಿಗ್ಗೆ ಬಾಗಿಲು ತೆರೆಯಲು ಮುಂದಾದಾಗ ಕಳ್ಳತನ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಮಳಿಗೆಗಳ ಮೇಲ್ಚಾವಣಿ ಕೊರೆದು ಒಳ ಪ್ರವೇಶಿಸಿರುವ ಕಳ್ಳರು ಬೆಲೆ ಬಾಳುವ ವಸ್ತುಗಳು ಮತ್ತು ಲಕ್ಷಾಂತಹ ಹಣ ಕೊಳ್ಳೆಹೊಡೆದಿದ್ದಾರೆ. ಸರಣಿ ಕಳ್ಳತನದಿಂದ ವ್ಯಾಪಾರಸ್ಥರು ಆತಂಕಗೊಂಡಿದ್ದೂ, ಮೈಸೂರಿನ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕಳ್ಳರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ