ಕಾಂಗ್ರೆಸ್ ಪಕ್ಷಕ್ಕೆ ಹಣಕಾಸಿನ ಮುಗ್ಗಟ್ಟು ಉಂಟಾಗಿದೆಯಾ.....?

Kannada News

26-01-2017

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ.. 60ಕ್ಕೂ ಹೆಚ್ಚು ವರ್ಷಗಳ ಕಾಲ ಅದು ದೇಶವನ್ನಾಳಿದೆ.. ಇಂತಹ ಪಕ್ಷಕ್ಕೆ ಈಗ ಆರ್ಥಿಕ ಮುಗ್ಗಟ್ಟು ಉಂಟಾಗಿದೆ ಅನ್ನೋ ಮಾತುಗಳು ಬಲ್ಲ ಮೂಲಗಳಿಂದಲೇ ಕೇಳಿಬರುತ್ತಿವೆ.. ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಮೇಲೆ ಕಾಂಗ್ರೆಸ್ ಪಕ್ಷ ರಾಜ್ಯಗಳಲ್ಲೂ ಅಧಿಕಾರ ಕಳೆದುಕೊಳ್ಳುತ್ತಾ ಬರುತ್ತಿದೆ.. ಈಗ ಕಾಂಗ್ರೆಸ್ ಕೈಯಲ್ಲಿರೋದು ಆರು ರಾಜ್ಯಗಳು ಮಾತ್ರ.. ಅದ್ರಲ್ಲಿ ಕರ್ನಾಟಕ ಬಿಟ್ಟರೆ ಉಳಿದವು ಸಣ್ಣಪುಟ್ಟ ರಾಜ್ಯಗಳು.. ಹೀಗಾಗಿ, ಪಕ್ಷ ಸಂಘಟನೆಯ ಹಣಕಾಸಿನ ವೆಚ್ಚಕ್ಕಾಗಿ ನಂಬಿಕೊಂಡಿರೋದು ಕರ್ನಾಟಕವನ್ನು ಮಾತ್ರ.. ಈಗ ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.. ಇದು ಕಾಂಗ್ರೆಸ್ ಪಕ್ಷಕ್ಕೆ ಮರ್ಯಾದೆಯ ಪ್ರಶ್ನೆ.. ಯಾಕಂದ್ರೆ, 6 ತಿಂಗಳ ಹಿಂದೆ ನಡೆದ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು.. ಇದೀಗ ಇಲ್ಲೂ ಅದೇ ಪರಿಸ್ಥಿತಿಯಾದರೆ ಕಾಂಗ್ರೆಸ್ ಪೂರ್ತಿ ಮಕಾಡೆ ಮಲಗಿಬಿಡುತ್ತೆ ಅನ್ನೋದು ಆ ಪಕ್ಷದ ನಾಯಕರ ಆತಂಕ.. ಹೀಗಾಗಿ ಚುನಾವಣೆ ಎದುರಿಸಲು ಹಣಕಾಸಿಗಾಗಿ ಪರದಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.. ಹಲವಾರು ದಶಕಗಳಿಂದ ಕಾಂಗ್ರೆಸ್ ದೇಶದ ಆಡಳಿತ ನಡೆಸಿದ್ದರಿಂದಾಗಿ ಇಲ್ಲೀತನಕ ಹಲವಾರು ಕಾರ್ಪೊರೇಟ್ ಕಂಪನಿಗಳು ಕಾಂಗ್ರೆಸ್ ಬೆನ್ನಿಗಿದ್ದವು. ಪಕ್ಷಕ್ಕೆ ಬೇರೆ ಬೇರೆ ರೀತಿಯಲ್ಲಿ ದೇಣಿಗೆ ನೀಡುತ್ತಿದ್ದವು. ಆದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿತು. ಇದಾದ ಮೇಲೆ ಕಾರ್ಪೊರೇಟ್ ಕಂಪನಿಗಳೆಲ್ಲಾ ಕಾಂಗ್ರೆಸ್ ಸಖ್ಯದಿಂದ ದೂರವಾದವು. ದೊಡ್ಡ ದೊಡ್ಡ ಕಂಪನಿಗಳೆಲ್ಲಾ ಮೋದಿ ಪರವಾಗಿ ನಿಂತವು. ಈ ಕಾರಣದಿಂದಾಗಿ ಕಾಂಗ್ರೆಸ್’ಗೆ ಪ್ರಮುಖ ಆದಾಯದ ಮೂಲಗಳೇ ಇಲ್ಲದಂತಾಗಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ