4 ದಿನ ಪರಿಶೀಲನೆ ಮಾಡುವಷ್ಟು ದಾಖಲೆಗಳಿವೆಯಾ..?

Kannada News

05-08-2017

ಮೈಸೂರು: ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಮಾವನ ಮನೆಯಲ್ಲಿ ಐಟಿ ಅಧಿಕಾರಿಗಳು ಇಂದೂ ಕೂಡ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸತತ 72 ಗಂಟೆಗಳ ಸುಧೀರ್ಘ ದಾಖಲೆಗಳ ತಪಾಸಣೆ ನಡೆಸಿದ್ದೂ, ತಿಮ್ಮಯ್ಯ ನಿವಾಸದಲ್ಲಿ ಏನೆಲ್ಲಾ ಮಹತ್ವದ ದಾಖಲೆಗಳಿವೆ ಎಂಬುದರ ಕುರಿತು ದಿನೆ ದಿನೆ ಕುತೂಹಲ ಹೆಚ್ಚುತ್ತಿದೆ. ಡಿಕೆಶಿಗೆ ಸಂಬಂಧಿಸಿದ ದಾಖಲೆಗಳನ್ನ ಮಾವನ ಮನೆಯಲ್ಲಿ ಸುರಕ್ಷಿತವಾಗಿ ಇಡಲಾಗಿತ್ತಾ?  ಐಟಿ ಅಧಿಕಾರಿಗಳ ನಿರಂತರ ಕಾರ್ಯಚರಣೆ ವಶವಾದ ದಾಖಲೆಗಳೇನು ? ಮಾವನ, ಮನೆಯಲ್ಲಿ ಡಿಕೆಶಿಗೆ ಸಂಬಂಧಿಸಿದ್ದು ಏನಿತ್ತು ? 4 ದಿನಗಳ ಕಾಲ ಪರಿಶೀಲನೆ ಮಾಡುವಷ್ಟು ದಾಖಲೆ ತಿಮ್ಮಯ್ಯ ಮನೆಯಲ್ಲಿದೆಯಾ ? ಎಂಬ ಪ್ರಶ್ನೆಗಳು ಕಾಡುತ್ತಿವೆ. ಇನ್ನು ದೆಹಲಿ, ಬೆಂಗಳೂರಿನಲ್ಲಿ ಸಿಕ್ಕಿದ ದಾಖಲೆಗಳಿಗೂ ಮೈಸೂರಿನ ದಾಖಲೆಗಳಿಗೂ ಸಂಬಂಧವಿದೆಯೇ ? ಎಂದು, ಐಟಿ ದಾಳಿ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೇ ಡಿ.ಕೆ.ಶಿವಕುಮಾರ್ ಮನೆಗೆ ಲ್ಯಾಪ್ ಟಾಪ್ ಅನ್ನು ಅಧಿಕಾರಿಗಳು ತೆಗೆದುಕೊಂಡು, ಡಿಕೆಶಿ ಆಪ್ತ ಕಾರ್ಯದರ್ಶಿ ಚಂದ್ರಶೇಖರ್ ಅವರನ್ನು ಜೊತೆಯಲ್ಲಿ ಕರೆ ತಂದಿದ್ದಾರೆ. ಐಟಿ ದಾಳಿಯ ಸಂಪೂರ್ಣ ವಿವರವುಳ್ಳ ಲ್ಯಾಪ್ ಟ್ಯಾಪ್ ಸದಾಶಿವನಗರ ಡಿಕೆಶಿ ಮನೆಯಲ್ಲಿರುವ ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದ್ದೂ, ಇಬ್ಬರು ಐಟಿ ಅಧಿಕಾರಿಗಳು ತಡರಾತ್ರಿ ಡಿಕೆಶಿ ಮನೆಗೆ ಆಗಮಿಸಿದ್ದಾರೆ. ಮತ್ತು ಡಿಕೆಶಿ ಮನೆಯಲ್ಲಿರುವ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

ಮತ್ತೊಂದು ಕಡೆ ಡಿಕೆಶಿ ಆಪ್ತನ ಮನೆಯಲ್ಲಿ ದಾಳಿ ಮುಂದುವರೆಸಿದ್ದಾರೆ. ಡಿಕೆಶಿ ಆಪ್ತ ಸುನೀಲ್ ಶರ್ಮಾ ಮನೆಯಲ್ಲಿ, ಎಂಟು ಜನ ಅಧಿಕಾರಿಗಳಿಂದ ಕಾರ್ಯಚರಣೆ ಮುಂದುವರೆಸಿದ್ದಾರೆ. ಎನ್.ಆರ್.ಕಾಲೋನಿಯಲ್ಲಿರುವ ಸುನೀಲ್ ಶರ್ಮಾ ಮನೆಯಲ್ಲಿ ಅಧಿಕಾರಿಗಳಿಂದ ತಪಾಸಣೆ ಮಾಡಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ