ತಾಯಿ-ಮಗಳು ನೇಣಿಗೆ ಶರಣು !

Kannada News

04-08-2017

ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ-ಮಗಳು ಇಬ್ಬರು ಸೇರಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ ಕುಮಾರ್ ಲೇಔಟ್‍ನಲ್ಲಿ ನಡೆದಿದೆ. ಕುಮಾರ್ ಲೇಔಟ್‍ನ ಸಿಂಧೂ (34) ಮತ್ತವರ ಪುತ್ರಿ ದೀಪ್ತಿ (17) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ, ಸಿಂಧೂ ಅವರ ಪತಿ ರಾಜಶೇಖರ ರೆಡ್ಡಿ ದಕ್ಷಿಣ ಆಫ್ರಿಕಾದಲ್ಲಿ ಗಾರ್ಮೆಂಟ್ಸ್ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಎರಡು ಮೂರು ತಿಂಗಳಿಗೊಮ್ಮೆ ಬಂದು ಹೆಂಡತಿ ಹಾಗೂ ಮಗಳನ್ನು ನೋಡಿಕೊಂಡು ಹೋಗುತ್ತಿದ್ದರು. ಪತಿ ಜೊತೆಯಲ್ಲಿ ಸರಿಯಾಗಿ ಇರದಿದ್ದರಿಂದ ಸಿಂಧೂ ಖಿನ್ನತೆಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಆವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ ರಾತ್ರಿ ಪಿಯುಸಿ ಓದುತ್ತಿದ್ದ ಪುತ್ರಿ ದೀಪ್ತಿಯ ಜೊತೆ ಆಕೆ ನೇಣಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ