ಗ್ಯಾಂಗ್ ವಾರ್ ತಪ್ಪಿಸಿದ ಪೊಲೀಸರು !

Kannada News

04-08-2017

ಕಲಬುರಗಿ: ಕಳೆದ ರಾತ್ರಿ ಅಕ್ರಮ ನಾಡ ಪಿಸ್ತೂಲ್ ಹೊಂದಿದ ತಂಡದ ಮೇಲೆ, ಹಟಾತ ದಾಳಿ ಮಾಡಿದ ಕಲಬುರಗಿ ಪೋಲೀಸರು ಒಂದು ನಾಡ ಪಿಸ್ತೂಲ್ ಸೇರಿದಂತೆ 20 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಕಲಬುರಗಿ ನಗರದ ಎಂ.ಎಸ್ ಕೆಮಿಲ್ ಪ್ರದೇಶದಲ್ಲಿ ನಡೆದಿದೆ. ಅಬ್ದುಲ್ ಬೇಗ್ ಅಲಿಯಾಸ್ ಫಯೂಮ್ ಬೇಗ್, ಸೈಯದ್ ಫಯಾಜ್ ಶೇಕ್ ಹುಸೇನ್, ಮತ್ತು ಬಬ್ಲೂ ಅಲಿಯಾಸ್ ಮಹಮ್ಮದ್ ಶಕಿರ್ ಬಂದಿತ ಆರೊಪಿಗಳು. ರೌಡಿ ಸೆವನ್ ಸ್ಟಾರ್ ಪ್ರದೀಪ್ ನನ್ನು ಕೊಲೆ ಮಾಡಲು ಈ ಮೂವರು ಆರೊಪಿಗಳು ಸ್ಕೆಚ್ ಹಾಕಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿಂದೆ ರೌಡಿ ಸೆವನ್ ಸ್ಟಾರ್ ಪ್ರದೀಪ್ ಗ್ಯಾಂಗ್, ಇನ್ನೊಂದು ಗ್ಯಾಂಗ್ ಮೇಲೆ ವಾರ್ ನಡೆಸಲಾಗಿತ್ತು, ಇದೇ ವ್ಯಷಮ್ಯ ಹಿನ್ನೆಲೆ ಎದುರಾಳಿ ಗ್ಯಾಂಗ್ ರೌಡಿ ಪ್ರದೀಪ್ ನನ್ನ ಮುಗಿಸಲು ರೆಡಿಯಾಗಿದ್ದ ಗ್ಯಾಂಗ್ ಅಂದರ್ ಆಗಿದೆ. ಬಂದಿತರಿಂದ ಒಂದು ನಾಡ  ಪಿಸ್ತೂಲ್, 20 ಜೀವಂತ ಗುಂಡು, ಮ್ಯಾಗ್ಜಿನ್ ಹಾಗೂ ಒಂದು ಕಾರು ವಶ ಪಡಿಸಿಕೊಳ್ಳಲಾಗಿದೆ. ಪೋಲೀಸರ ಸಮಯ ಪ್ರಜ್ಞೆಯಿಂದ ನಗರದಲ್ಲಿ ನಡೆಯುವ ಗ್ಯಾಂಗ್ ವಾರ್ ತಪ್ಪಿಸಿದ್ದಾರೆ . ಈ ಮೂವರು ಬಂಧಿತರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ