ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಆಸ್ತಿ ತನಿಖೆ..?

Kannada News

04-08-2017

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಖೆಡ್ಡಕ್ಕೆ ಸಿಲುಕಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‍ ಗೆ ದಿನದಿಂದ ದಿನಕ್ಕೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದು, ಇದೀಗ ಜಾರಿ ನಿರ್ದೇಶನಾಲಯ (ಇಡಿ)ತನಿಖೆ ನಡೆಸಲು ಮುಂದಾಗಿದೆ. ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆಸುತ್ತಿರುವ ದಾಳಿಯಲ್ಲಿ ಶಿವಕುಮಾರ್ ಅವರ ಸಹೋದರ ಸಂಬಂಧಿಕರ ಮನೆ, ಕಚೇರಿಗಳಲ್ಲಿ ಭಾರೀ ಪ್ರಮಾಣದ ನಗದು,ಆಸ್ತಿ, ಬೇನಾಮಿ ಹೆಸರಿನಲ್ಲಿ ಹಣ ಹೂಡಿಕೆ, ನಕಲಿ ಕಂಪನಿಗಳನ್ನು ಸೃಷ್ಟಿಸಿರುವುದು, ಇಂಧನ ಇಲಾಖೆಯಲ್ಲಿ ಭ್ರಷ್ಟಚಾರ ನಡೆಸಿರುವುದು , ನಿಷೇಧಗೊಂಡಿರುವ ಹಳೆಯ ನೋಟುಗಳ ಸಂಗ್ರಹಣೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಯಾವುದೇ ವ್ಯಕ್ತಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ 30 ಲಕ್ಷಕ್ಕಿಂತ ಹೆಚ್ಚಿನ ಹಣ ಕಂಡು ಬಂದರೆ ಐಟಿ ನಿಯಮದ ಪ್ರಕಾರ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತದೆ.  ಈ ಹಿಂದೆ ಆಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ. ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ.ವೈಎಸ್‍ಆರ್ ರಾಜಶೇಖರ್ ರೆಡ್ಡಿ ಪುತ್ರ ಹಾಗೂ ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗಮೋಹನ್‍ ರೆಡ್ಡಿ ಮೇಲೆ ಸಿಬಿಐ ದಾಳಿ ನಡೆಸಿದಾಗ ಆಪಾರ ಪ್ರಮಾಣದ ಆಸ್ತಿ, ನಗದು ಹಾಗೂ ಬೇನಾಮಿ ಆಸ್ತಿಯನ್ನು ಪತ್ತೇ ಮಾಡಲಾಗಿತ್ತು.

ಯಾವುದೇ ವ್ಯಕ್ತಿ ಕಾನೂನುಬಾಹಿರವಾಗಿ ಆದಾಯಕ್ಕೀಂತ ಹೆಚ್ಚಿನ ವಾಹಿವಾಟು ನಡೆಸುವುದಾಗಲೀ ಇಲ್ಲವೇ ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅದು ಶಿಕ್ಷಾರ್ಹ ಆಪಾರಧವಾಗುತ್ತದೆ. ಜೊತೆಗೆ ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿ ಮಾಡಿರುವ ನೂತನ ನಿಯಮದಂತೆ ಬೇನಾಮಿ ಆಸ್ತಿ ಹೊಂದಿರುವುದು ದೃಢವಾದರೆ ಅವರ ಮೇಲೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಬುಧವಾರದಿಂದ ಇಂದಿನವರೆಗೂ ಐಟಿ ಅಧಿಕಾರಿಗಳು ನಡೆಸಿರುವ ದಾಳಿಯ ವೇಳೆ ಒಟ್ಟು 11 ಕೋಟಿಗೂ ಅಧಿಕ ನಗದು, ಆಪಾರ ಪ್ರಮಾಣದ ವಜ್ರಾಭರಣಗಳು, ಕೋಟ್ಯಾಂತರ ರೂ. ಬೆಲೆ ಬಾಳುವ ಫ್ಲಾಟ್‍ಗಳು , ಸಹೋದರ , ಸಹೋದರಿ ,ಮಾವ ಆಪ್ತರು ಸೇರಿದಂತೆ ಶಿವಕುಮಾರ್ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಣೆ ಮಾಡಿದ್ದು ದಾಳಿಯ ವೇಳೆ ಪತ್ತೆಯಾಗಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ