ಭಯವೇತಕೆ ನಿಮಗೆ..?

Kannada News

04-08-2017

ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತ, ಇದು ಕೇಂದ್ರ ಸರ್ಕಾರದ ಪಿತೂರಿ, ಇತ್ಯಾದಿ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ. ಆದರೆ, ರಾಜ್ಯದ ಪ್ರಮುಖ ವಿರೋಧ ಪಕ್ಷ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ  ಬಿಜೆಪಿಯ ಕರ್ನಾಟಕದ ನಾಯಕರು ಮಾತ್ರ, ಡಿ.ಕೆ.ಶಿವಕುಮಾರ್ ವಿರುದ್ಧ ಗಟ್ಟಿದನಿಯಲ್ಲಿ ಮಾತೇ ಆಡಿಲ್ಲ. ಇದು, ಡಿಕೆಶಿ ಮನೆ ಮೇಲೆ ಐಟಿ ರೈಡ್ ನಂತರ, ರಾಜ್ಯ ಬಿಜೆಪಿ ಮುಖಂಡರು ಯಾವ ರೀತಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ, ಎಂಬ ಬಗ್ಗೆ ಒಂದು ಸೂಕ್ಷ್ಮ ಸಮೀಕ್ಷೆ ನಡೆಸಿದ ಸೂಪರ್ ಸುದ್ದಿಗೆ ಕಂಡು ಬಂದ ಸಂಗತಿ.

ರಾಜ್ಯ ಬಿಜೆಪಿ ನಾಯಕರ ಸಪ್ಪೆ ಪ್ರತಿಕ್ರಿಯೆಗಳಿಗೆ ಕಾರಣ ಏನಿರಬಹುದು ಎಂದು ಹುಡುಕಿದರೆ, ಬಹುತೇಕ ಬಿಜೆಪಿ ನಾಯಕರಿಗೆ ಡಿ.ಕೆ.ಶಿವಕುಮಾರ್ ಅವರನ್ನು ಎದುರು ಹಾಕಿಕೊಳ್ಳಲು ವೈಯಕ್ತಿವಾಗಿ ಇಷ್ಟವಿಲ್ಲ. ಇದರ ಜೊತೆಗೆ, ರಾಜ್ಯಸರ್ಕಾರದ ವಿರೋಧ ಕಟ್ಟಿಕೊಳ್ಳುವ ಧೈರ್ಯವೂ ಇದ್ದಂತೆ ಕಾಣುತ್ತಿಲ್ಲ. ಒಂದು ವೇಳೆ, ಡಿಕೆಶಿ ಮತ್ತು ಸಿದ್ದರಾಮಯ್ಯ ಸರ್ಕಾರದವರು ರೊಚ್ಚಿಗೆದ್ದು, ತಮ್ಮ ಬಂಡವಾಳವನ್ನೆಲ್ಲಾ ಬಯಲು ಮಾಡಿಬಿಟ್ಟಿರೆ ಏನು ಮಾಡುವುದು ಎಂಬ ಭಯ ರಾಜ್ಯ ಬಿಜೆಪಿ ಮುಖಂಡರನ್ನು ಕಾಡುತ್ತಿರಬಹುದು, ಹೀಗಾಗಿ, ‘ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಅನಗತ್ಯ ಪ್ರತಿಕ್ರಿಯೆ ನೀಡುವುದು ಬೇಡ’ ಎಂದು ಹೈ ಕಮಾಂಡ್ ನಮಗೆ ಸೂಚನೆ ನೀಡಿದೆ ಎಂದು, ರಾಜ್ಯ ಬಿಜೆಪಿ ಮುಖಂಡರು ಸಬೂಬು ಹೇಳುತ್ತಿದ್ದಾರೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ