ಮಹಿಳೆಯರ ಜಡೆಗಳು ರಾತ್ರೋ ರಾತ್ರಿ ಕಟ್ !

Kannada News

04-08-2017

ಲಖನೌ: ರಾತ್ರಿ ಬೆಳಗಾಗೋದ್ರೊಳಗೆ ಮಲಗಿದ್ದವರ ಜಡೆ ಕಟ್ ಆಗುತ್ತಿದ್ದ ವಿಚಾರವಾಗಿ ಉತ್ತರ ಪ್ರದೇಶದ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ದೆಹಲಿ, ಹರಿಯಾಣ, ರಾಜಸ್ಥಾನದ ನಂತರ ಈಗ ಉತ್ತರ ಪ್ರದೇಶದಲ್ಲೂ ಈ ಸುದ್ದಿ ಹರಡುತ್ತಿದ್ದು, ಇದನ್ನ ನಂಬಬೇಡಿ ಅಂತಾ ಉತ್ತರ ಪ್ರದೇಶದ  ಪೊಲೀಸರು ಮನವಿ ಮಾಡಿದ್ದಾರೆ. ಇತ್ತೀಚೆಗೆ ಉತ್ತರದ ಭಾರತದ ಹಲವು ಕಡೆ ಮಹಿಳೆರ ಜಡೆಗಳು ರಾತ್ರೋ ರಾತ್ರಿ ಕಟ್ ಆಗುತ್ತಿದ್ದು ಜನರಲ್ಲಿ ಆತಂಕವನ್ನ ಹೆಚ್ಚಿಸಿದ್ದವು. ಯಾವುದೋ ಅಗೋಚರ ಶಕ್ತಿಯೇ ಈ ಕೆಲಸಗಳನ್ನ ಮಾಡುತ್ತಿದೆ ಎಂದು ಜನ ನಂಬತೊಡಗಿದ್ದರು.

ಇತ್ತೀಚೆಗೆ, ಒಬ್ಬ ಮಹಿಳೆಯ ಜಡೆ ಕತ್ತರಿಸಿದವಳ ಮುಖ ಬೆಕ್ಕಿನಂತಿತ್ತು ಎಂದು ಪೀಡಿತೆ ಹೇಳಿದ್ದಕ್ಕೆ ಪಕ್ಕದಲ್ಲಿ ಕುಳಿತಿದ್ದ ಬೆಕ್ಕಿನ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ತಕ್ಷಣ ಆ ಬೆಕ್ಕನ್ನು  ಗುಂಪೊಂದು ಅದರ ಕತ್ತು ಕತ್ತರಿಸಿ ಸಾಯಿಸಿದ್ದರು. ಇನ್ನು, ಉತ್ತರ ಪ್ರದೇಶದ ಖೋರಕ್ ಪುರದಲ್ಲಿ ಬಾಲಕಿಯೊಬ್ಬಳ ಜಡೆ ಕಟ್ ಆಗಿತ್ತು. ಇದು ಭೂತ ಮಾಡಿದ್ದಲ್ಲ. ತಂತ್ರ-ಮಂತ್ರಕ್ಕೆ ಬಲಿಯಾದ ಬಾಲಕಿ ತಾನೇ ಕೂದಲು ಕಟ್ ಮಾಡಿಕೊಂಡಿದ್ದಾಳೆಂದು ಪೊಲೀಸರು ಹೇಳಿದ್ದರು. ರೋಗ ದೂರ ಮಾಡಲು ಮಂತ್ರವಾದಿ ಹೇಳಿದ ಮಾತು ಕೇಳಿ ಬಾಲಕಿ ಕೂದಲು ಕಟ್ ಮಾಡಿಕೊಂಡಿದ್ದಳು ಎನ್ನಲಾಗುತ್ತಿದೆ.  ಕುರಿತು ಪೊಲೀಸರು ಇದನ್ನೆಲ್ಲಾ ನಂಬಬೇಡಿ ಎಂದು ಮನವಿಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ