ಐಟಿ ದಾಳಿ: ಡಿಕೆಶಿ ರಾಜಕೀಯ ಶಕ್ತಿ ಹೆಚ್ಚಾಗುತ್ತದೆ..?

Kannada News

04-08-2017

ಮಂಡ್ಯ: ಡಿ.ಕೆ ಶಿವಕುಮಾರ್ ಅವರ ಮೆನೆ ಮೇಲೆ ದಾಳಿಗೆ ಸಂಬಂಧಿಸಿದಂತೆ, ಮಂಡ್ಯದಲ್ಲಿ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಐಟಿ ದಾಳಿ ಸರ್ವೆ ಸಾಮಾನ್ಯ ಪ್ರಕ್ರಿಯೆ, ಆದರೆ ಇದು ದೇಶದಲ್ಲಿ ಚರ್ಚೆ ಆಗೋ ಸಂದರ್ಭವನ್ನು ಕೇಂದ್ರ ಸರ್ಕಾರ ಕ್ರಿಯೇಟ್ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ ಅನ್ನೋದು ಎಲ್ಲರ ಮಾತು, ದ್ವೇಷದ ಮತ್ತು ರಾಜಕೀಯ ಪ್ರೇರಿತ ದಾಳಿಗೆ ಇಲಾಖೆಗಳನ್ನು ಕೇಂದ್ರ ಬಳಸಿಕೊಳ್ಳುವುದು ಸೂಕ್ತವಲ್ಲ. ರಾಜಕೀಯ ಪ್ರೇರಿತ ದಾಳಿ ನಿಲ್ಲಬೇಕು, ನಿಲ್ಲಬಹುದು ಎಂಬ ಭಾವನೆ ಇದೆ ಎಂದರು. ನಿಲ್ಲಿಸದೇ ಇದ್ದರೆ ಮುಂದೆ ಇದೇ ರೀತಿ ಮುಂದುವರಿಯೋ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೇ ದಾಳಿಯಿಂದ ಡಿಕೆಶಿಗೆ ರಾಜಕೀಯ ಶಕ್ತಿ ಹೆಚ್ಚಾಗುತ್ತೆ ವಿನಃ ಹಿನ್ನಡೆ ಆಗುವುದಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ