ತಂಗಿಗೆ ಚಾಕುವಿನಿಂದ ಇರಿದ ಅಣ್ಣ

Kannada News

04-08-2017

ಉತ್ತರ ಕನ್ನಡ: ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನ್ನ ದೊಡ್ಡಪ್ಪನ ಮಗಳಾದ ಸಹೋದರಿಯ ಮೇಲೆ ಚಿಕ್ಕಪ್ಪನ ಮಗನೊಬ್ಬ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಶಿರಸಿಯ ಯಲ್ಲಾಪುರ ತಾಲ್ಲೂಕಿನ ಅರಬೈಲ್ ಗ್ರಾಮದಲ್ಲಿ ನಡೆದಿದೆ. ಅರಬೈಲ್ ಮೂಳೆಪಾಲ್ ನಿವಾಸಿ ಮೇನಕಾ ಶಿವರಾಮ್ ಶೆಟ್ಟಿ, ಈಕೆಯ ಮೇಲೆ ಚಿಕ್ಕಪ್ಪನ ಮಗ ದಾಮೋದರ್ ಸುಬ್ರಹ್ಮಣ್ಯ ಶೆಟ್ಟಿ, ಕತ್ತಿಯಿಂದ ತಲೆ ಹಾಗೂ ಬೆನ್ನಿನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಮೇನಕಾಳನ್ನು ಯಲ್ಲಾಪುರದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ .

ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದೆ ಎನ್ನಲಾಗಿದೆ, ಶುಕ್ರವಾರ ಬೆಳಗ್ಗೆ ಮೇನಕಾ ಹಾಗೂ ದಾಮೋದರ್ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ದಾಮೋದರ್ ಮನೆಯಲ್ಲಿ ಇದ್ದ ಕತ್ತಿಯಿಂದ ಆಕೆಯ ತಲೆ ಹಾಗೂ ಬೆನ್ನಿನ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಸುತ್ತಿದ್ದ ಆಕೆಯನ್ನು ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಲಾಗಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ