ರಾಜೀನಾಮೆ ಕೇಳುವ ನೈತಿಕತೆ ಇವರಿಗಿಲ್ಲ..?

Kannada News

04-08-2017

ಬೆಂಗಳೂರು: ಡಿಕೆಶಿ ಮನೆ ಮೇಲಿನ ದಾಳಿಗೆ ಸಿಎಂ‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ, ಇದೊಂದು ರಾಜಕೀಯ ಪ್ರೇರಿತ ದಾಳಿ, ಈ ಸಮಯದಲ್ಲಿ ದಾಳಿ ನಡೆಸಿದ್ದು ಸರಿಯಲ್ಲ, ಅಲ್ಲದೇ ರೆಸಾರ್ಟ್ ಗೆ ಹೋಗಿ ದಾಳಿ ಮಾಡಿದ್ದೂ, ಸರಿಯಲ್ಲ ಎಂದು ಹೇಳಿದ್ದಾರೆ. ರೆಸಾರ್ಟ್ ಗೆ ಹೋಗಿ ಗುಜರಾತ್ ಶಾಸಕರಿಗೆ ಅಮಿಷ ಒಡ್ಡಿದ್ದಾರೆ, ಇದು ಕೇಂದ್ರ ಸರ್ಕಾರದ ಪಿತೂರಿ ಎಂದು ಆರೋಪಿಸಿದ್ದಾರೆ. ಕೇಂದ್ರ ಮಂತ್ರಿ ಅನಂತಕುಮಾರ್ ಅವರ ಮೇಲೆ ಭ್ರಷ್ಟಾಚಾರ ಆರೋಪವಿದೆ, ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬಿ.ಎಸ್.ವೈ ಅವರ ಮೇಲೂ ಆರೋಪ ಇದೆ, ಹೀಗಿರುವಾಗ ಇವರು ಡಿ.ಕೆ.ಶಿವಕುಮಾರ್ ಅವರನ್ನು ರಾಜೀನಾಮೆ ಕೇಳುವುದಕ್ಕೆ ಯಾವ ನೈತಿಕತೆ ಇದೆ ಇವರಿಗೆ ಎಂದಿದ್ದಾರೆ. ದಾಳಿಯಲ್ಲಿ ಡಿಕೆಶಿ ಮನೆಯಲ್ಲಿ ಏನು ಸಿಕ್ಕಿದೆ, ಸಿಕ್ಕಿಲ್ಲ ಅನ್ನೋದು ನಮಗೆ ಗೊತ್ತಿಲ್ಲ ಎಂದರು. ಡಿ.ಕೆ.ಶಿವಕುಮಾರ್ ಮನೆ ಮೇಲಿನ ದಾಳಿಗೆ ಸಿ.ಆರ್.ಪಿ.ಎಫ್. ಬಳಸಿದ್ದು ಏಕೆ..? ಎಂದು ಪ್ರಶ್ನಿಸಿದ್ದೂ, ಈ ಬಗ್ಗೆ ಸಚಿವರ ಸಭೆಯನ್ನು ಕರೆದು ಮಾತನಾಡುತ್ತೇನೆ ಎಂದು ತಿಳಿಸಿದರು. ಐಟಿ ದಾಳಿಗೆ ನನ್ನ ವಿರೋಧ ಇಲ್ಲ, ಯಾರ ಮನೆ ಮೇಲೆ ದಾಳಿಯಾದರೂ, ನಾನು ವಿರೋಧಿಸಲ್ಲ ಆದರೆ ಈ ಸಮಯದಲ್ಲಿ ದಾಳಿ ನಡೆಸಿ, ಗುಜರಾತ್ ಶಾಸಕರಿಗೆ ಅಮಿಷಯೊಡ್ಡಿದ್ದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದ್ದಾರೆ. ಡಿಕೆಶಿ ಅವರು ಆರೋಪಗಳಿಂದ ಹೊರಬರುತ್ತಾರೋ..ಏನೋ ಗೊತ್ತಿಲ್ಲ ಅವರ ಮನೆಯಲ್ಲಿ ಏನು ಸಿಕ್ಕಿದೆ ಏನು ಇಲ್ಲ ಎಂಬುದು ಗೊತ್ತಿಲ್ಲ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ