ಚಿನ್ನದ ಸರ ಎಗರಿಸಿದ ಕಳ್ಳಿಯರು !

Kannada News

04-08-2017

ಮಂಡ್ಯ: ಗಮನ ಬೇರೆಡೆ ಸೆಳೆದು ಮಹಿಳೆಯ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಸಾಗರದ ಬಳಿ ಸರಗಳ್ಳತನ ನಡೆದಿದೆ. ಕಮಲಮ್ಮ ಎಂಬುವರ ಸರ ಕಳೆದುಕೊಂಡವರು. ಸುಮಾರು 23 ಗ್ರಾಂ ತೂಕದ ಚಿನ್ನದ ಸರ ಎಂದು ತಿಳಿದು ಬಂದಿದೆ. ಜಗಳವಾಡುತ್ತಿದ್ದಂತೆ ನಟಿಸುತ್ತಿದ್ದ ಇಬ್ಬರು ಅಪರಿಚಿತ ಮಹಿಳೆಯರು, ಅದೇ ಜಾಗದಲ್ಲಿ ಹೋಗುತ್ತಿದ್ದ ಕಮಲಮ್ಮ ಅವರನ್ನು ನ್ಯಾಯ ಮಾಡುವಂತೆ ಕರೆದಿದ್ದಾರೆ. ಈ ವೇಳೆ ಆಣೆ ಮಾಡಲು ಮಾಂಗಲ್ಯ ಸರ ಬಿಚ್ಚಿಸಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕಮಲಮ್ಮ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೂ, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ