ಇನ್ನೂ ಮುಗಿಯದ ದಾಖಲೆಗಳ ಪರಿಶೀಲನೆ !

Kannada News

04-08-2017

ಮೈಸೂರು: ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿರುವ ಸಚಿವ ಡಿ.ಕೆ.ಶಿವಕುಮಾರ್ ಅವರ, ಮಾವ ತಿಮ್ಮಯ್ಯ ಮನೆಯಲ್ಲಿ ಸತತ ಮೂರನೇ ದಿನವೂ, ಐಟಿ ಆಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸತತ 48 ಗಂಟೆಗಳ ಬಳಿಕವೂ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಇಂದು ಡಿಕೆಶಿ ಮಾವನ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ವಾತಾವರಣ ಇರಬೇಕಿತ್ತು, ಆದರೆ ಹಬ್ಬಕ್ಕೆ ಸಂಬಂಧಿಕರು ಬರಬೇಕಿದ್ದ ಜಾಗದಲ್ಲಿ ಐಟಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದಾರೆ. ಮನೆಯೊಳಗೆ ಐಟಿ ಅಧಿಕಾರಿಗಳು, ಹೊರಗೆ ಪೊಲೀಸ್ ಸಿಬ್ಬಂದಿಗಳು ಬೀಡು ಬಿಟ್ಟಿದ್ದು, ದಾಖಲಗಳ ಪರಿಶೀಲನೆ ಮುಂದುವರೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ