ಬೈಕ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು !

Kannada News

04-08-2017 185

ಚಿತ್ರದುರ್ಗ: ಮನೆ ಆವರಣದಲ್ಲಿ ನಿಲ್ಲಿಸಿದ್ದ  ಬೈಕ್ ಗೆ ಪೆಟ್ರೋಲ್ ಬಾಂಬ್ ಎಸೆದು ಸುಟ್ಟು ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ನಗರಗದ ವಿಪಿ ಬಡಾವಣೆಯಲ್ಲಿ, ರವಿ ಎನ್ನುವ ಕಂಟ್ರಾಕ್ಟರ್ ಮನೆಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದಾರೆ. ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬೈಕ್ ಎಂದು ತಿಳಿದು ಬಂದಿದೆ. ಬೈಕ್ ಸುಟ್ಟುಹಾಕಿರುವ ದುಷ್ಕರ್ಮಿಗಳು ಯಾರು ಎಂದು ತಿಳಿದು ಬಂದಿಲ್ಲ. ವಿ.ಪಿ  ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ