ಕೆರೆಗಳ ಸಂರಕ್ಷಣೆಗೆ ಲೋಕಾಯುಕ್ತರಿಗೆ ದೂರು !

Kannada News

03-08-2017

ಬೆಂಗಳೂರು: ನಗರದಲ್ಲಿನ ಸುಮಾರು 20ಕ್ಕೂ ಹೆಚ್ಚು ಕೆರೆಗಳನ್ನು ಸಂರಕ್ಷಿಸಬೇಕೆಂದು ಯುನೈಟೆಡ್ ಬೆಂಗಳೂರು ಸಂಘಟನೆಯ ನಿಯೋಗ ಲೋಕಾಯುಕ್ತರಿಗೆ ಗುರುವಾರ ದೂರು ಸಲ್ಲಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಲೋಕಾಯುಕ್ತರನ್ನು ಭೇಟಿ ಮಾಡಿ, ಹೈಕೋರ್ಟ್ ಕೆರೆಗಳ ಸಂರಕ್ಷಣೆ ಆದೇಶ ನೀಡಿದ್ದರೂ, ಅಧಿಕಾರಿಗಳು ಆದೇಶ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಕೆರೆಗಳ ಸಂರಕ್ಷಣೆ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ನಿಯೋಗ ಲೋಕಾಯುಕ್ತರಲ್ಲಿ ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಎಸ್. ದೊರೆಸ್ವಾಮಿ ಅವರು, ನಿರ್ಜೀವ ಕೆರೆಗಳನ್ನು ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ಡಿ-ನೋಟಿಫೈ ಮಾಡಕೂಡದು ಎಂದು ಒತ್ತಾಯಿಸಿದರು. ಕೆರೆಗಳು ನಗರದ ಜೀವನಾಡಿ ಇದ್ದಂತೆ,ಆ ಕೆರೆಗಳನ್ನು ಉಳಿಸಲು ನ್ಯಾಯಾಲಯ ಆದೇಶ ನೀಡಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದನ್ನು ಖಂಡಿಸಿದ್ದಾರೆ. ದೊಡ್ಡನೆಕ್ಕುಂದಿ ಕೆರೆ, ತಲಘಟ್ಟಪುರ ಕೆರೆ, ಸೋಂಪುರ ಕೆರೆ, ಪುಟ್ಟೇನಹಳ್ಳಿ ಕೆರೆ, ಅಲ್ಲಾಳಸಂದ್ರ, ಯಲಹಂಕ ಕೆರೆಗಳು, ಸುಬ್ರಮಣ್ಯಕೆರೆ, ಸಾರಕ್ಕಿ ಕೆರೆ ಸೇರಿದಂತೆ ನಗರದಲ್ಲಿರುವ ಕೆರೆಗಳನ್ನು ಸಂರಕ್ಷಿಸಿ ಪೋಷಿಸಬೇಕೆಂದು ಒತ್ತಾಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ