ಲಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಸಾವು !

Kannada News

03-08-2017

ಬೆಂಗಳೂರು: ಸೆಕೆಂಡ್ ಶೋ ಸಿನೆಮಾ ನೋಡಿಕೊಂಡು, ದೇವನಹಳ್ಳಿಯ ಹಳೆ ಸಾರಿಗೆ ಕಚೇರಿ ಬಳಿ ಮನೆಗೆ ವೇಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದ, ಶೋಭಾ ಡೆವಲಪರ್ಸ್‍ನಲ್ಲಿ ಉದ್ಯೋಗಿಯೊಬ್ಬ ಮುಂದೆ ಹೋಗುತ್ತಿದ್ದ ಲಾರಿಗೆ ಪಕ್ಕದಿಂದ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ.

ಮೃತಪಟ್ಟವರನ್ನು ಶಿಡ್ಲಘಟ್ಟದ ಮೇಲೂರಿನ ಗೋವಿಂದರಾಜು (30)ಎಂದು ಗುರುತಿಸಲಾಗಿದೆ. ಶೋಭಾ ಡೆವಲಪರ್ಸ್‍ ನಲ್ಲಿ ಉದ್ಯೋಗಿಯಾಗಿದ್ದ ಗೋವಿಂದರಾಜು, ನಿನ್ನೆ ರಾತ್ರಿ ವಿಜಯಪುರದವಲ್ಲಿ ಸಿನೆಮಾ ನೋಡಿಕೊಂಡು ಬುಧವಾರ ರಾತ್ರಿ 11.45ರ ವೇಳೆ ಮನೆಗೆ ವೇಗವಾಗಿ ಯಮಹಾ ಬೈಕ್‍ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ದೇವನಹಳ್ಳಿಯ ಹಳೆ ಆರ್.ಟಿ.ಓ ಕಚೇರಿ ಬಳಿ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಹೋಗಿ ಪಕ್ಕದಲ್ಲಿ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿರುವ ದೇವನಹಳ್ಳಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ