ಸುಪ್ರೀಂ ಆದೇಶ ನಿರ್ಲಕ್ಷ್ಯ 6 ಮಂದಿ ಸೆರೆ !

Kannada News

03-08-2017 184

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶವನ್ನು ನಿರ್ಲಕ್ಷಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ, ರಾಷ್ಟ್ರೀಯ ಹೆದ್ದಾರಿಗಳ ಬಳಿಯ ಡಾಬಾ ಹಾಗೂ ಹೋಟೆಲ್‍ಗಳ ಮೇಲೆ ನೆಲಮಂಗಲ ಪೊಲೀಸರು ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ 6 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೆದ್ದಾರಿ ಪಕ್ಕದ ಮದ್ಯದಂಗಡಿಗಳ ಕಡಿವಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿ ಒಂದು ತಿಂಗಳು ಕಳೆದಿದ್ದರೂ, ಹೆದ್ದಾರಿ ಪಕ್ಕದ ಡಾಬಾ ಹಾಗೂ ಹೋಟೆಲ್‍ಗಳಲ್ಲಿ ಕದ್ದು ಮುಚ್ಚಿ ಮದ್ಯ ಮಾರಾಟ ನಡೆಯುತ್ತಿರುವುದರ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ನೆಲಮಂಗಲದ ಹೆದ್ದಾರಿ ಪಕ್ಕದ ಡಾಬಾ ಹಾಗೂ ಹೋಟೆಲ್‍ಗಳಲ್ಲಿ ಮದ್ಯಮಾರಾಟ ಮಾಡುತ್ತಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ನೆಲಮಂಗಲ ಪೊಲೀಸರು , ಡಾಬಾಗಳ ಮೇಲೆ ದಿಢೀರ್ ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಪಟ್ಟಣದ ಮನೋಜ್, ತಿರುಮಲ, ವೈಟಿ, ಫಿಶ್‍ಲ್ಯಾಂಡ್, ನರ್ತಕಿ ಹಾಗೂ ಇನ್ನಿತರ ಡಾಬಾಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ವಶಕ್ಕೆ ಪಡೆದು ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.ದಾಳಿ ನಡೆಸಲು ಪೊಲೀಸರು ಬಂದಿದ್ದನ್ನು ನೋಡಿದ ಕುಡುಕರು ಕೈಯಲ್ಲಿದ್ದ ಬಾಟಲಿಗಳನ್ನು ಹಿಡಿದು ದಿಕ್ಕಾಪಾಲಾಗಿ ಓಡಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ