ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದ ಸಚಿವ ಸಂಪುಟದ ಉಪಸಮಿತಿಯಿಂದ ಬರ ಪೀಡಿತ ಹಳ್ಳಿಗಳಿಗೆ ಭೇಟಿ

Kannada News

14-03-2017 255

ಧಾರವಾಡ :  ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಕೆರೆ ಕಾಮಗಾರಿ ವೀಕ್ಷಣೆ, ಸಚಿವ ದೇಶಪಾಂಡೆಗೆ ಜಲ ಸಂಪನ್ಮೂಲ‌ ಸಚಿವ ಎಂ.ಬಿ. ಪಾಟೀಲ ಸಾಥ್ 

ಧಾರವಾಡ‌ ಜಿಲ್ಲೆಯಲ್ಲಿ ನಡೆಯುತ್ತಿರುವ ಬರ ಪರಿಹಾರ ಕಾಮಗಾರಿಗಳನ್ನು ವೀಕ್ಷಿಸಲಿರುವ ಸಚಿವರು,ನರೇಗಾ ಯೋಜನೆಯಡಿ ನಡೆಯುವ ಕಾಮಗಾರಿಯಲ್ಲಿ ತೊಡಗಿದವರಿಗೆ ಜೀವ ವಿಮೆ ಮಾಡಿಸಲು ಆಗ್ರಹ. ಧಾರವಾಡ ತಾಲೂಕಿನ ಮಾರಡಗಿಯಲ್ಲಿ‌ ಕೆರೆ ಅಭಿವೃದ್ಧಿ ‌ಕಾಮಗಾರಿಯಲ್ಲಿ ತೊಡಗಿದ್ದ ಕೂಲಿಕಾರರಿಂದ ಕೇಳಿ ಬಂದ ಆಗ್ರಹ.

ಸಚಿವ ಸಂಪುಟದ ಬೆಳಗಾವಿ ವಿಭಾಗದ ಉಪಸಮಿತಿ ಅಧ್ಯಕ್ಷ ಸಚಿವ ಆರ್.ವಿ. ದೇಶಪಾಂಡೆ ಮತ್ತು ಜಲಸಂಪನ್ಮೂಲ ‌ಸಚಿವ ಎಂ.ಬಿ. ಪಾಟೀಲರನ್ನು ಒತ್ತಾಯಿಸಿದ ಕೂಲಿಕಾರರು. ಬರ ಪರಿಹಾರ ಕಾಮಗಾರಿ ‌ಪ್ರಗತಿ ಪರೀಲನೆಗೆ ಆಗಮಿಸಿರುವ ಉಪಸಮಿತಿ, ನರೇಗಾ ಜಾಬ್ ಕಾರ್ಡ್ ಆಧರಿಸಿ ಜೀವವಿಮೆ ಮಾಡಿಸುವ ಕುರಿತು ಬಜೆಟನಲ್ಲಿ ವಿಶೇಷ ಯೋಜನೆ ಪ್ರಕಟಣೆಯಾಗಲಿರುವ ಭರವಸೆ ನೀಡಿದ ಸಚಿವ ದೇಶಪಾಂಡೆ.                       
ದೇವಿ ಕೃಪೆಯಿಂದಲೇ ಮಳೆಯಾದ್ರೆ ಮಾತ್ರವೇ ಈಗಿನ ಬರ ಹೋಗಲು ಸಾಧ್ಯ, ಧಾರವಾಡ ಜಿಲ್ಲೆಯ ಬರ‌ಪರಿಹಾರ ‌ಕಾಮಗಾರಿ ಪರಿಶೀಲನೆ ಬಳಿಕ ಮಾತನಾಡಿದ ಸಚಿವರು. ಪುನಃ ತಲಾ ೪೦ ಲಕ್ಷ ರೂಪಾಯಿ ಶಾಸಕರ ಅಧ್ಯಕ್ಷತೆಯ ಟಾಕ್ಸಪೋರ್ಸಗೆ ಹೆಚ್ಚಿನ ಅನುದಾನ ನೀಡಿದ್ದೇವೆ

ಸದ್ಯ ಜಿಲ್ಲೆಗೆ ನೀಡುತ್ತಿರುವ ಮೇವು ಜಾನುವಾರ ತಿನ್ನುತ್ತಿಲ್ಲ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬಿಳಿಜೋಳದ ಮೇವು ತರಲು ಕ್ರಮ ಕೈಗೊಳ್ಳಲಾಗುವುದು  ನರೇಗಾ ಜಾಬ್ ಕಾರ್ಡ್ ಹೊಂದಿದವರಿಗೆ ಜೀವವಿಮೆ ಮಾಡಿಸಲು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿಕೆ ನೀಡಿದರು.
 

ಕಳಸಾ ಬಂಡೂರಿ,‌ಮಹದಾಯಿ ವಿಚಾರಕ್ಕೆ ಗೋವಾ ಚುನಾವಣೆ ಅಡ್ಡಿಯಾಗಿತ್ತು ಅಲ್ಲೊಂದು ಸರ್ಕಾರ ರಚನೆಯಾಗ್ತಾ ಇದೆ.
ಮತ್ತೆ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ ಗೋವಾ ಸಿಎಂ ಕರೆಯಿಸಿ ಮಾತುಕತೆ ಮಾಡುವಂತೆ ಪ್ರಧಾನಿಗೆ ಮತ್ತೆ ವಿನಂತಿ ಮಾಡ್ತೆವು, ಕೇಂದ್ರ ಜಲ ಆಯೋಗ ಮಹದಾಯಿದಲ್ಲಿ ೧೯೯ ಟಿಎಂಸಿ ನೀರಿರೋದನ್ನು ದೃಢೀಕರಿಸಿದೆ 
 ಅದರಲ್ಲಿ ನಮಗೆ ೧೫ ಟಿಎಂಸಿ ಮಾತ್ರ ಬಂದ್ರೆ, ಉಳಿದಿದ್ದೆಲ್ಲವೂ  ಗೋವಾ ಹಕ್ಕು ಸಿಗುತ್ತೆ, ಇದರಿಂದ ಗೋವಾಗೂ ಲಾಭವಿದ್ದು ಅದನ್ನು ಗೋವಾದ ಸರ್ಕಾರ ಅರಿಯಬೇಕಿದೆ. ಅಲ್ಲಿ ಯಾವ ಸರ್ಕಾರ ಬರುತ್ತೋ ಬರ್ಲಿ, ಸರ್ಕಾರ ಬಂದ ನಂತ್ರ ನ್ಯಾಯಾಧೀಕರಣದ ನಿರ್ದೇಶನದ ಮೇರೆಗೆ ಮತ್ತೆ ಮಾತುಕತೆಗೆ ಮುಂದಾಗುತ್ತೇವೆಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿಕೆ

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ