ಡಿಕೆಶಿ ಆಪ್ತರ ಮನೆ ಮೇಲೂ ಐಟಿ ದಾಳಿ !

Kannada News

03-08-2017

ಹಾಸನ: ಡಿಕೆಶಿ ಆಪ್ತ ಮತ್ತು ಬಿ.ಶಿವರಾಂ ಅಳಿಯ ಸಚಿನ್ ನಾರಾಯಣ್ ಮನೆ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು, ಸಚಿನ್ ನಾರಾಯಣ್ ಗೂ ಶಾಕ್ ನೀಡಿದ್ದಾರೆ. ಹಾಸನದ  ಬಿಎಂ‌ ರಸ್ತೆಯಲ್ಲಿರುವ ನಿವಾಸ, ಹೋಟೆಲ್ ಮತ್ತು ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿಯಿಂದ ಆಗಮಿಸಿದ್ದ ಮುಖ್ಯ ಅಧಿಕಾರಿ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿ, ದಾಳಿಯ ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ಇನೋವಾ ಕಾರಿನಲ್ಲಿ ಬಂದಿದ್ದ ಅಧಿಕಾರಿಗಳು, ದಾಖಲೆ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಇನ್ನು ಸ್ಥಳದಲ್ಲಿ ಪೊಲೀಸರ ಮೊಕ್ಕಾಂ ಹೂಡಿದ್ದೂ, ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Namaste news
  • C.n.vijaya kumar
  • Anyway