ಐಟಿ ದಾಳಿ: ಮುಂದುವರೆದ ದಾಖಲೆಗಳ ಪರಿಶೀಲನೆ !

Kannada News

03-08-2017

ಮೈಸೂರು: ನಿನ್ನೆ ಇಂಧನ ಸಚಿವ ಡಿಕೆಶಿ ಅವರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಐಟಿ ದಾಳಿ ನಡೆಸಿದ್ದೂ, ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಡಿಕೆಶಿ ಮಾವನ ಮನೆಯಲ್ಲಿ ಇಂದೂ ಕೂಡ, ಐಟಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಮೈಸೂರಿನ ಇತಿಹಾಸದಲ್ಲೆ ಇದು ಅತಿದೊಡ್ಡ ಐಟಿ ದಾಳಿ ಎಂದು ಹೇಳಲಾಗುತ್ತಿದ್ದೂ, ಸತತ 24 ಗಂಟೆಗಳ ಕಾಲ ಸುಧೀರ್ಘ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಡಿಕೆಶಿ ಮಾವನ ಮನೆಯಲ್ಲಿ ಮಹತ್ವದ ದಾಖಲೆಗಳು ಇವೆಯಾ? ಎಂಬ ಅನುಮಾನಕ್ಕೆ ಪುಷ್ಠಿ ನೀಡಿವೆ. ಕಳೆದ ತಡರಾತ್ರಿವರೆಗೂ ದಾಖಲೆಗಳ ಪರಿಶೀಲನೆ ಮಾಡಿದ್ದ ಐಟಿ ಅಧಿಕಾರಿಗಳು. ಎಲ್ಲಾ ದಾಖಲೆಗಳ ಪರಿಶೀಲನೆ ಮುಗಿಯದ ಕಾರಣ, ದಾಳಿ ಮಾಡಿದ ಮನೆಯಲ್ಲೇ ನಿದ್ರೆಗೆ ಜಾರಿದ್ದರು. ದೆಹಲಿಯಿಂದ ಆಗಮಿಸಿದ್ದ ಮುಖ್ಯ ಅಧಿಕಾರಿ‌ ಮಾತ್ರ ಕಳೆದ ತಡ ರಾತ್ರಿ ಮನೆಯಿಂದ ನಿರ್ಗಮಿಸಿದ್ದರು. ಉಳಿದ ಎಲ್ಲ ಐಟಿ ಅಧಿಕಾರಿಗಳು ರಾತ್ರಿ ಡಿಕೆಶಿ ಮಾವನ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಇನ್ನು ಇಂದೂ ಕೂಡ ಐಟಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವೆರೆದಿದೆ. ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿರುವ ಡಿಕೆಶಿ ಮಾವನ ಮನೆಯಲ್ಲಿ ಮಹಿಳೆಯರು ಇದ್ದ ಕಾರಣ, ಮಹಿಳಾ ಪೊಲೀಸರು ಕೂಡ ಮನೆಯಲ್ಲೆ ವಾಸ್ತವ್ಯ ಹೂಡಿದ್ದರು. ಅಧಿಕಾರಿಗಳ ಜೊತೆ ಮಹಿಳಾ ಪೊಲೀಸ್, ಪುರುಷ ಪೊಲೀಸ್ ಅಧಿಕಾರಿಗಳು ಸಹ ಮನೆಯಲ್ಲೆ ವಾಸ್ತವ್ಯ ಹೂಡಿದ್ದರು. ಮನೆಯಲ್ಲೇ ಉಳಿದುಕೊಂಡು ದಾಖಲೆಗಳ ಪರಿಶೀಲನೆ ಮುಂದುವರಿಸಿರುವ ಐಟಿ ಅಧಿಕಾರಿಗಳು. ಇನ್ನು ಡಿಕೆಶಿ ಮಾವನ ಮನೆಯಲ್ಲಿರುವ ವ್ಯಕ್ತಿಗಳಿಗೆ ದಿಗ್ಬಂದನ ಹೇರಲಾಗಿದ್ದೂ, ಮನೆಯಲ್ಲಿದ್ದ ಮಕ್ಕಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಹಾಗೂ ಇಂದು ಮಕ್ಕಳನ್ನು ಶಾಲೆಗೆ ಹೋಗಲು ವಿನಾಯಿತಿ ನೀಡಿದ್ದಾರೆ. ಯಾರನ್ನೂ ಮನೆ ಒಳಗೆ ಬಿಡದೆ, ಒಳಗಿರುವವರನ್ನು ಹೊರಗೂ ಕಳುಹಿಸದೆ ಐಟಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ಮಂದುವರಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ