ಅಡಕೆ ಬೆಳೆಗಾರರು  ಹಾಗೂ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವಂತೆ ಒತ್ತಾಯ

Kannada News

14-03-2017

ಶಿರಸಿ : ಖಾತೆಸಾಲ ಮನ್ನಾ, ಬೆಳೆ ಸಾಲ ಮನ್ನಾ ವಿಷಯವನ್ನೂ ಒಳಗೊಂಡು ಅಡಕೆ ಬೆಳೆಗಾರರು  ಹಾಗೂ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘ ಟಕದ ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಮಂಗಳವಾರ ಶಿರಸಿಯಲ್ಲಿ ಆರಂಭವಾಗಿದೆ.
ಪಕ್ಷದ ಧುರೀಣ ಶಶಿಭೂಷಣ ಹೆಗಡೆ ಮಾತನಾಡಿ, ರಾಜ್ಯದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಸರ್ಕಾರದ ಗಮನ ಸೆಲಕೆಯುವ ಕೆಲಸ ಮಾಡಲಾಗುತ್ತಿದೆ ಎಂದರು. 
ಕೃಷಿಕರು ಮತ್ತು ಅತಿಕ್ರಮಣದಾರರ ಕಡೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಖಾತೆ ಸಾಲ ಮನ್ನಾ ವಿಚಾರದ ಕುರಿತು ಹೋರಾಟ ನಿರಂತತವಾಗಿದ್ದರೂ ಕೃಷಿ ಸಾಲ ಎಂದು ಪರಿವರ್ತನೆ ಆಗಿಲ್ಲ. ಕೆಡಿಸಿಸಿ ಬ್ಯಾಂಕ್, ನಬಾರ್ಡನವರು ಈ ಬಗ್ಗೆ ಸರ್ಕಾರಕ್ಕೆ ತಿಳಿಸಿವೆ. ಆದರೆ ಈ ಬಗ್ಗೆ ಇನ್ನೂ ಕ್ರಮವಾಗಿಲ್ಲ. ಇದರ ಬಗ್ಗೆ ಸರ್ಕಾರ ತಕ್ಷಣ ಖಾತೆ ಸಾಲವನ್ನು ಕೃಷಿ ಸಾಲವನ್ನಾಗಿ ಪರಿವರ್ತಿಸಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.  
ಬೆಳೆ ಸಾಲದ ಮನ್ನಾ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಾಟಕ ನಡೆಯುತ್ತಿದೆ. ಕೇವಲ ಸಾಲ ವಿತರಣೆಯಿಂದ ಸಮಸ್ಯೆ ಪರಿಹಾರವಾಗದು. ಸಾಲ ಮನ್ನಾ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ೫೦ರಷ್ಟು ಹೊಂದಾಣಿಕೆ ಮೇಲೆ ಬೆಳೆ ಸಾಲ ಮನ್ನಾ ಮಾಡಬೇಕು ಎಂದ ಅವರು, ಬೆಂಬಲಬೆಲೆಯಡಿ ಖರೀದಿ ನಡೆಯದೆ ಅಡಕೆ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಬೆಂಬಲಬೆಲೆ ಅನುಷ್ಠಾನವಾಗಿದ್ದರೆ ಅಡಕೆಯ ಈಗಿನ ಬೆಲೆಗಿಂತ ಹೆಚ್ಚಿನ ಬೆಲೆ ದೊರಕುತ್ತಿತ್ತು. ಹೀಗಾಗಿ ಇಂತಹ ಯೋಜನೆ ರದ್ದುಗೊಳಿಸಬೇಕು ಎಂದರು. 
ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯ ಪ್ರೀಮಿಯಂ ಮೊತ್ತ ಕಟ್ಟಿಸಿಕೊಳ್ಳುವುದು ಬೆಳೆ ಸಾಲದ ಜೊತೆ ಸೇರಿಸಬಾರದು. ವಿಮಾ ಪ್ರೀಮಿಯಂ ಮೊತ್ತ ಇಳಿಸಬೇಕು ಎಂದ ಶಶಿಭೂಷಣ ಹೆಗಡೆ,
ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲ ಮರುಪಾವತಿ ವಿಚಾರವಾಗಿ ಬ್ಯಾಂಕ್ ಮೇಲಿನ ಜವಾಬ್ದಾರಿ ರೈತರ ಮೇಲೆ ಹಾಕಲಾಗುತ್ತಿದೆ. ಇದನ್ನು ಕೈಬಿಡಬೇಕು ಎಂದರು. 
ಅಡಕೆ ಹಾನಿಕಾರಕ ವಿಚಾರದ ವರದಿ ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಹಿಂದಿನಂತೆಯೇ ಇದ್ದು ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಈ ಪ್ರಕರಣವನ್ನು ವಿತ್ ಡ್ರಾ ಮಾಡಬೇಕು ಎಂದು ಆಗ್ರಹಿಸಿದರು. 
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ, ಅರಣ್ಯ ಅತಿಕ್ರಮಣದಾರರ ಸಮಸ್ಯೆ ಹೆಚ್ಚುತ್ತಿದೆ. ಅರಣ್ಯ ಅತಿಕ್ರಮಣ ವಿಚಾರವು ಅಧಿಕಾರಿಗಳು ಬದಲಾದಂತೆ ಬದಲಾಗುತ್ತ ಹೋಗುತ್ತಿದೆ. ಇದು ರಾಜಕೀಯ ಪಕ್ಷಗಳ ದಾಳವಾಗಿದೆ ಎಂದರು. ಹೀಗಾಗಿ ಅವಾಸ್ತವಿಕವಾಗಿ ಅಧಿಕಾರಿಗಳು ನಡೆಯುವದನ್ನು ಜಿಲ್ಲಾಧಿಕಾರಿಗಳು ನಿಯಂತ್ರಿಸಬೇಕು. ವೈಜ್ಞಾನಿಕ ವರದಿ ಸಿದ್ಧಪಡಿಸಿ ಅಧಿಕಾರಿಗಳಲ್ಲಿನ ಗೊಂದಲ ನಿವಾರಿಸಬೇಕು ಎಂದರು. ಈ ವೇಳೆ ಪಕ್ಷದ ಪ್ರಮುಖರಾದ ಆರ್.ಜಿ.ನಾಯ್ಕ, 
ಶೇಖರ ಪೂಜಾರಿ, ಜುಬೇರ್ ಜುಕಾಕೋ ಇದ್ದರು.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಇತ್ತೀಚಿನ ಸುದ್ದಿ

View more...


ಟಾಪ್ ಪ್ರತಿಕ್ರಿಯೆಗಳು


  • Professional
  • Professional