ಯುವತಿ ಅಪರಹಣಕ್ಕೆ ಬಂದವರಿಗೆ ಗೂಸ !

Kannada News

03-08-2017

ಬೆಳಗಾವಿ: ಪ್ರೀತಿಸಿದ್ದ ಯುವತಿಯನ್ನು ಅಪಹರಿಸಲು ಕಾರಿನಲ್ಲಿ ಬಂದಿದ್ದ ಯುವಕರನ್ನು ಅಡ್ಡಗಟ್ಟಿ, ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲೆಯ ಗೋಕಾಕ ತಾಲ್ಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ, ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ ಯುವಕರ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ್ದಾರೆ. ರಾಯಚೂರು ಮೂಲದ ನಾಲ್ವರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದೂ, ಒರ್ವನ ಸ್ಥಿತಿ ಗಂಭೀರವಾಗಿದೆ. ಇವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಿದ್ದೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಶ್ ಎನ್ನುವ ಯುವಕ ಗುಲಗುಂಜಿಕೊಪ್ಪ ಗ್ರಾಮದಲ್ಲಿ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಅಲ್ಲದೇ ಇನ್ನೆರಡು ದಿನದಲ್ಲಿಯೇ ಯುವತಿ ಮದುವೆ ಇತ್ತು. ಹಾಗಾಗಿ ಯುವತಿಯನ್ನು ಅಪಹರಿಸಿಕೊಂಡು ಹೋಗಲು ಮಹೇಶ್ ಜೊತೆ ಸ್ನೇಹಿತರಾದ ಅರುಣಕುಮಾರ, ವಿಜಯ್ ಹಾಗೂ ರಮೇಶ್ ಜೊತೆ ಬಂದಿದ್ದ. ಈ ವಿಚಾರ ಮನೆಯವರಿಗೆ ಗೊತ್ತಾಗಿ ಹಲ್ಲೆ ನಡೆಸಲು ಮುಂದಾದಾಗ, ತಪ್ಪಿಸಿಕೊಂಡು ಕಾರಿನಲ್ಲಿ ಹೊರಟ್ಟಿದ್ದರು. ಕಾರು ತೆಗೆದುಕೊಂಡು ಹೋಡಿ ಹೋಗುವುದನ್ನ ಗಮನಿಸಿದ ಪಕ್ಕದ ಅವರಾದಿ, ಮಿರ್ಜಿ ಗ್ರಾಮಸ್ಥರು ಇವರು ಮಕ್ಕಳ‌ ಕಳ್ಳರೆಂದು ಭಾವಿಸಿ, ಇವರ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ ಮತ್ತು ಯುವಕರನ್ನ ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ಇವರು ಬಂದಿದ್ದ ಕಾರನ್ನು ಕೂಡ ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಇದೀಗ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ