ಅಹಮ್ಮದ್ ಪಟೇಲ್ ರನ್ನು ಸೋಲಿಸಲು ಐಟಿ ದಾಳಿ...?

Kannada News

02-08-2017

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ, ಸಚಿವ ಡಿ.ಕೆ ಶಿವಕುಮಾರ್ ಮನೆ‌ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ನಾನು ಕೇಂದ್ರ ಸಚಿವನಾಗಿದ್ದಾಗ, ಅಧಿಕಾರ ಇದ್ದರೂ ಐಟಿ ಇಲಾಖೆಯ ದುರುಪಯೋಗ ಮಾಡಿಲ್ಲ ಎಂದರು. ಐಟಿ ಯಾವ ಪಕ್ಷ ಹಾಗೂ ವ್ಯಕ್ತಿಗೆ ಸೇರಿದ ಸಂಸ್ಥೆ ಅಲ್ಲ, ಹಾಗಿದ್ದರೂ ಸಿ.ಆರ್.ಪಿ.ಎಫ್ ಜೊತೆ ಐಟಿ ದಾಳಿ ಮಾಡಿದ್ದು ಕೀಳು ಮಟ್ಟದ ರಾಜಕೀಯ ಎಂದಿದ್ದಾರೆ, ಅಲ್ಲದೇ ಸಿ.ಆರ್.ಪಿ.ಎಫ್ ಬಳಸಿ ಆ ಸಂಸ್ಥೆಯ ಮಾನ ಮರ್ಯಾದೆ ಹೋಗುವಂತೆ ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿ.ಆರ್.ಪಿ.ಎಫ್ ಬಳಸಲು ಡಿ.ಕೆ ಶಿವಕುಮಾರ್ ಭಯೋತ್ಪಾದಕರೇ ? ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ರೈಡ್ ಮಾಡುವ ಮೊದಲು ಸರ್ಚ್ ವಾರೆಂಟ್ ಯಾಕೆ ತಂದಿಲ್ಲ, ನಿಯಮಗಳನ್ನು ಯಾಕೆ ಪಾಲನೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸಚಿವ ಡಿ.ಕೆ ಶಿವಕುಮಾರ್ ಭಯೋತ್ಪಾದಕ ರೀತಿಯಲ್ಲಿ ಚಿತ್ರಿಸಲಾಗಿದೆ. ಪ್ರಧಾನಿ ಮೋದಿಯನ್ನು, ಯಾರೂ ಕೇಳುವವರಿಲ್ಲ ಎಂಬ ಭಾವನೆ ಅವರಿಗೆ ಬಂದಿದೆ, ಇವತ್ತು ಸಚಿವ ಡಿ.ಕೆ ಶಿವಕುಮಾರ್ ನಾಳೆ ಜನಾರ್ಧನ್ ಪೂಜಾರಿ ನಂತರ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನೂ ಜೈಲಿಗೆ ಕಲುಹಿಸುವ ಪ್ರಯತ್ನ ಮಾಡುತ್ತಾರೆ ಎಂದರು. ಐಟಿ ದಾಳಿ ಬಗ್ಗೆ ಕಾಂಗ್ರೆಸ್ ಗೆ ಹೆದರಿಕೆ ಇಲ್ಲ, ಆದರೆ ಕಾನೂನನ್ನು ಮೀರುವ ಅಧಿಕಾರ ಕೇಂದ್ರಕ್ಕೆ ಇಲ್ಲ ಎಂದರು.  ಅಹಮ್ಮದ್ ಪಟೇಲ್ ಸೋಲಿಸಲು ಐಟಿ ರೈಡ್ ಮಾಡಲಾಗಿದೆ ಎಂದು ಆರೋಪಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ