ವೀರಶೈವ ಮಾಹಾಸಭಾ ಮುಖಂಡರ ಸಭೆ !

Kannada News

02-08-2017

ಬೆಂಗಳೂರು: ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಸಂಬಂಧ ಅಖಿಲ ಭಾರತ ವೀರಶೈವ ಮಾಹಾಸಭಾ ಮುಖಂಡರು, ಬೆಂಗಳೂರಿನಲ್ಲಿ ಸುದೀರ್ಘ ಸಭೆ ನಡೆಸಿದರು. ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ. ಎನ್.ತಿಪ್ಪಣ್ಣ. ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ. ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಸಹಿತ ಹಲವಾರು ಮುಖಂಡರು ಸಭೆಯಲ್ಲಿ ಭಾಗಬಹಿಸಿ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನದ ಸಾಧಕ ಬಾಧಕಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.                       

ಸಭೆಯ ನಂತರ ಸುದ್ದಿಘೋಷ್ಠಿಯಲ್ಲಿ ವಿವರ ನೀಡಿದ ಈಶ್ವರ ಖಂಡ್ರೆ ವೀರಶೈವ, ಲಿಂಗಾಯತ ಸ್ವತಂತ್ರ ಧರ್ಮದ ಮನವಿ ಹೊಸ ಮನವಿಯಲ್ಲ. ಈ ಹಿಂದೆಯೂ ಮನವಿ ನೀಡಲಾಗಿದೆ. 1981 ಜನಗಣತಿ ಸಮಯದಲ್ಲಿ ವೀರಶೈವ, ಲಿಂಗಾಯತರಿಗೆ ಪ್ರತ್ಯೇಕ ಕೋಡ್ ನೀಡುವಂತೆ ವೀರಶೈವ ಮಹಾಸಭಾ ಮನವಿ ಮಾಡಿತು. ಅದೇ ರೀತಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೂ ಮನವಿಸಲ್ಲಿಸಲಾಗಿತ್ತು. ಯುಪಿಎ ಸರ್ಕಾರದ ಗೃಹ ಸಚಿವರಾದ ಸುಶೀಲ್ ಕುಮಾರ್ ಸಿಂದೆ ಮನವಿ ಸಲ್ಲಿಸಲಾಯಿತು.  ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ಆದರೆ ಬೇರೆ ಬೇರೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ, ನಮ್ಮಲ್ಲಿ ಕೆಲವರು ಪಿತೂರಿ ಮಾಡಿ ವೀರಶೈವ, ಲಿಂಗಾಯತ ಒಡೆಯಲು ಹೊರಟ್ಟಿರುವುದು ಸರಿಯಲ್ಲ. ಹಾನಗಲ್ ಕುಮಾರಸ್ವಾಮಿ ಅವರು ವೀರಶೈವ ಧರ್ಮ ಸ್ಥಾಪಕರು. ವೀರಶೈವ, ಲಿಂಗಾಯತ ಸ್ವತಂತ್ರ ಧರ್ಮದ ಉದ್ದೇಶ ಸರ್ಕಾರದ ಸವಲತ್ತುಗಳನ್ನು ಪಡೆಯುವುದಕ್ಕಲ್ಲ. ವೀರಶೈವ, ಲಿಂಗಾಯತ ಎರಡು ಒಂದೆ ಎರಡನ್ನು ಸೇರಿಸಿ ಪ್ರತ್ಯೇಕ ಧರ್ಮ ಆಗಬೇಕು ಎಂದು ಸಭೆಯಲ್ಲಿ ನಿರ್ಣಯ ಒಮ್ಮತದಿಂದ ಕೈಗೊಳ್ಳಲಾಗಿದೆ.  ವೀರಶೈವ ಮತ್ತು ಲಿಂಗಾಯತ ನಾಯಕರನ್ನು ಒಂದೇ ವೇದಿಕೆಯಲ್ಲಿ ತಂದು ಭಿನ್ನ ಮತ ಹೋಗಲಾಡಿಸಲು ಶೀಘ್ರ ಇನ್ನೊಂದು ಸಭೆ ಕರೆಯಲಾಗುವುದು. ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪನೆ ಆಗಿ ಇಂದಿಗೆ ನೂರಾ ಮೂರು ವರ್ಷಗಳಾಯಿತು. ಇವರೆಗೂ ಇಪ್ಪತ್ಮೂರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು. ಶಾಮನೂರು ಶಿವಶಂಕರಪ್ಪ ಮಾತನಾಡಿ 110 ವರ್ಷಗಳಲ್ಲಿ ಇಲ್ಲದ ಗೊಂದಲ ಕಳೆದ ಹದಿನೈದು ದಿನಗಳಲ್ಲಿ ಗೊಂದಲ ನಿರ್ಮಾಣವಾಗಿದೆ. ವೀರಶೈವ, ಲಿಂಗಾಯತ ಎರಡು ಒಂದೆ. ಧರ್ಮ ಒಡೆಯವ ಕೆಲಸ ಯಾರು ಮಾಡಬಾರದು ವಿರೋಧ ಮಾಡುವವರನ್ನು ಕರೆದು ಮಾತನಾಡಲಾಗುವುದು, ಒಪ್ಪದಿದ್ದದವರನ್ನು ಅಲ್ಲೆ ಬಿಡಲಾಗುವುದು. ಭಿನ್ನ ನಿಲುವು ತಳೆದ ಸಚಿವ ಎಂ.ಬಿ.ಪಾಟೀಲ ಅವರೊಂದಿಗೆ ಚರ್ಚಿಸಿ ಮನವೊಲಿಸಲಾಗುವುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ