ಅಂಗಡಿಗೆ ನುಗ್ಗಿದ ಬಸ್: ಮಾಲೀಕ ಸಾವು !

Kannada News

02-08-2017

ಬೆಂಗಳೂರು: ನಗರದ ಹೊರವಲಯದ ನೆಲಮಂಗಲದ, ತ್ಯಾಮಗೊಂಡ್ಲುವಿನಲ್ಲಿ ಬಸ್ ಒಂದರ ಬ್ರೇಕ್ ಫೇಲ್ ಆಗಿ, ಚಿಲ್ಲರೆ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕ ದಾರುಣವಾಗಿ ಸಾವನ್ನಪ್ಪಿದ್ದಾನೆ. ತ್ಯಾಮಗೊಂಡ್ಲುವಿನ ಅಡವೀಶಯ್ಯ(45) ಮೃತ ದುರ್ದೈವಿ ಗುರುತಿಸಲಾಗಿದೆ. ದಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರಕ್ಕೆ ನಿನ್ನೆ ಮಧ್ಯಾಹ್ನ ಹೊರಟ್ಟಿದ್ದಾಗ,  ಬಸ್ ಬ್ರೇಕ್ ಫೇಲ್ ಆಗಿ ಅಂಗಡಿಗೆ ನುಗ್ಗಿ ಅಡವೀಶಯ್ಯ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆಯಿಂದ ಅಂಗಡಿ ಸಂಪೂರ್ಣ ಜಖಂಗೊಂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ತ್ಯಾಮ್ಲಗೊಂಡು ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ